ಬೆಂಗಳೂರು: ಡಿಕೆಶಿ ರಣತಂತ್ರಕ್ಕೆ ಬೆಚ್ಚಿಬಿದ್ದ ಬಿಜೆಪಿ.! 2028 ಕ್ಕೆ ಬಿಜೆಪಿ ಧೂಳೀಪಟ ಆಗುತ್ತಾ..?

ರಾಜ್ಯ

ರಾಷ್ಟ್ರರಾಜಕರಣದ ಚಾಣಕ್ಯ ಅಮಿತ್ ಷಾ ತಂತ್ರಗಾರಿಕೆಗೆ ತಿರುಮಂತ್ರ ಕೊಟ್ಟ ಡಿಕೆಸಿ.!

ಒನ್ಸ್ ಎಗೈನ್.. ಪ್ರಿಯಾಂಕ ಗಾಂಧಿ ಕೊಟ್ಟ ಚಮಕ್ ವರ್ಕ್ ಔಟ್ ಆಗಿದೆ. 2028 ರವರೆಗೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಆಗಿ ಉಳಿಸಿಕೊಂಡಿದ್ದರೆ ತಮಿಳ್ನಾಡು ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಲಿದೆ. ರಾಜಕಾರಣದಲ್ಲಿ ಮಾಸ್ ಲೀಡರ್ ಒಂದೇ ಗೆಲುವಿಗೆ ಅಸ್ತ್ರವಲ್ಲ. ತಂತ್ರ , ಮಂತ್ರ, ಕುತಂತ್ರ ಮಾಡಿದರಷ್ಟೇ ಗೆಲುವು ಸಾಧ್ಯ. ಅಂತಹ ರಣತಂತ್ರ ಮಾಡುವ ಚಾಕಚಕ್ಯತೆ ಡಿಕೆಶಿಗಿದೆ. ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಸೋನಿಯಾ, ರಾಹುಲ್ ಮುಂದೆ ಗಟ್ಟಿ ಧ್ವನಿಯಲ್ಲಿ ಡಿಕೆಶಿ ಪರ ಮಾತನಾಡಿದ್ದು ಪ್ರಿಯಾಂಕಾ ಗಾಂಧಿ ಒಬ್ಬರೇ. ಇವತ್ತು ರಾಜ್ಯದಲ್ಲಿ ಡಿಕೆಶಿ ದರ್ಬಾರ್ ಆರಂಭಕ್ಕೆ ಕಾರಣವಾಗಿದ್ದು ಅದೇ ಪ್ರಿಯಾಂಕಾ ಗಾಂಧಿ.

ಸಿದ್ದರಾಮಯ್ಯ ರಂತಹ ಮಾಸ್ ಲೀಡರ್ ಅನ್ನು ಕೆಳಗಿಳಿಸಿ ಪಟ್ಟಕ್ಕೇರಿದ ಡಿಕೆಶಿ ರಾಜ್ಯದಲ್ಲಿ ಏನು ಪವಾಡ ಮಾಡಲಿದ್ದಾರೆ. ಹತ್ತರಲ್ಲಿ ಹನ್ನೊಂದು ರೀತಿ ಡಿಕೆಶಿ ಎರಡು ವರ್ಷ ರಾಜ್ಯಭಾರ ಆರಾಮವಾಗಿ ಮುಗಿಸುತ್ತರಾ ಅನ್ನುವ ಅನುಮಾನ ಕಾಂಗ್ರೆಸ್ಸಿಗರಲ್ಲಿ ಕಾಡಿದಂತೂ ದಿಟ. ಆದರೆ ಒಂದೇ ಚುನಾವಣೆ ಇವತ್ತು ರಾಜ್ಯ ರಾಜಕಾರಣದಲ್ಲಿ ಡಿಕೆಶಿ ಯನ್ನು ಪವರ್ ಫುಲ್ ನಾಯಕರಾಗಿ ಬಿಂಬಿಸಿದೆ. ಅದು ಬೇರಾವುದೂ ಅಲ್ಲ. ವಿಧಾನಪರಿಷತ್ ಚುನಾವಣೆ.

ರಾಷ್ಟ್ರ ರಾಜಕಾರಣದಲ್ಲಿ ಚಾಣಾಕ್ಷ ಅಮಿತ್ ಷಾ ಬಿಜೆಪಿಗೆ ಏನು ಮಾಡುತ್ತಿದ್ದಾರೋ ಅದೇ ಕೆಲಸವನ್ನು ಕರ್ನಾಟಕದಲ್ಲಿ ಡಿಕೆಶಿ ಕಾಂಗ್ರೆಸ್ ಗೆ ಮಾಡುತ್ತಿದ್ದಾರೆ. ಅಮಿತ್ ಶಾ ತಂತ್ರ ಕುತಂತ್ರದ ಮಧ್ಯೆ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ವಿಲವಿಲ ಒದ್ದಾಡುತ್ತಿದೆ. ಪ್ರಾದೇಶಿಕ ಪಕ್ಷಗಳ ಸಂಸದರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ದೆಹಲಿಯ ಆರು ಮಂದಿ ಆಮ್ ಆದ್ಮಿ ರಾಜ್ಯ ಸಭಾ ಸದಸ್ಯರನ್ನು ಬಿಜೆಪಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಚುನಾವಣಾ ರಾಜಕಾರಣದಲ್ಲಿ ಪಶ್ಚಿಮ ಬಂಗಾಳದಲ್ಲಿ ದೀದಿಯನ್ನು ಮಣ್ಣು ಮುಕ್ಕಿಸಿದ ಬಿಜೆಪಿ ಅದರ 20 ಸಂಸತ್ ಸದಸ್ಯರನ್ನು ತನ್ನ ತೆಕ್ಕೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣದಲ್ಲಿ ಪವರ್ ಫುಲ್ ಆಗಿ ಮಿಂಚಿದ್ದ ದೀದಿ ಈಗ ಅನಾಥವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಬಣವನ್ನು ಹೋಳು ಮಾಡಿ ಅದರ ಆರರಿಂದ ಏಳು ಸಂಸದರು ಎನ್ ಡಿಎ ಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ ಉತ್ತರ ಪ್ರದೇಶದತ್ತ ಕಣ್ಣು ಹಾಯಿಸಿರುವ ಶಾ ಅಖಿಲೇಶ್ ಅವರ ಸಮಾಜವಾದಿ ಕೋಟೆಯನ್ನೇ ಧ್ವಂಸ ಮಾಡಲು ಹೊಂಚು ಹಾಕುತ್ತಿದೆ. ಅಮಿತ್ ಶಾ ಕೊಟ್ಟ ಏಟಿಗೆ ಮಹಾ ಘಟಬಂಧನ್ ಪೂರ್ತಿ ಶೇಕ್ ಆಗಿದೆ.

ಈಗ ಕರ್ನಾಟಕಕ್ಕೆ ಬನ್ನಿ. ರಾಷ್ಟ್ರ ರಾಜಕಾರಣದಲ್ಲಿ ಅಮಿತ್ ಶಾ ಮಾಡಿರುವ ಅದೇ ಫಾರ್ಮುಲಾ ವನ್ನು ಚಾಚೂ ತಪ್ಪದೆ ಪಾಲಿಸಿರುವ ಡಿಕೆಶಿ ಇಲ್ಲಿ ಕಾಂಗ್ರೆಸ್ ಗೆ ದೊಡ್ಡ ಯಶಸ್ಸು ತಂದುಕೊಟ್ಟರೆ, ಇಲ್ಲಿ ಬಿಜೆಪಿ ಕೋಟೆ ಮಾತ್ರ ಫುಲ್ ಶೇಕ್ ಆಗಿ ಬಿಟ್ಟಿದೆ. ಜೆಡಿಎಸ್ ಅಂತೂ ಧೂಳೀಪಟ ಆದಂತಿದೆ. ಇಂದೋ ನಾಳೆಯೋ ಬಿಜೆಪಿ ಜೆಡಿಎಸ್ ಮಹಾಮೈತ್ರಿ ಕಡಿದುಕೊಳ್ಳುವ ಎಲ್ಲಾ ಸಂಭವವಿದೆ. ಇದಕ್ಕೆಲ್ಲ ಕಾರಣ ಡಿಕೆಶಿ ಕೊಟ್ಟ ಆ ಚೆಕ್ ಮೇಟ್ ಕಾರಣ.

ವಿಧಾನಪರಿಷತ್ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲೇ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಡಿಕೆಶಿ ಮುಖ್ಯಮಂತ್ರಿ ಆದ ನಂತರ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದಾದ ಭಿನ್ನಮತ ಸೃಷ್ಟಿಯಾಗಬಹುದು ಎಂಬುದು ಎಲ್ಲರ ಅನುಮಾನ ಇತ್ತು. ಆದರೆ ಡಿಕೆಶಿ ಹೂಡಿದ ರಣತಂತ್ರಕ್ಕೆ ಬಿಜೆಪಿ ಬೆಚ್ಚಿಬಿದ್ದಿದೆ. ಜೆಡಿಎಸ್ ನಲ್ಲಿ ಅಡ್ಡ ಮತದಾನದ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ ಬಿಜೆಪಿಯಲ್ಲೇ ಈ ಪ್ರಮಾಣದ ಅಡ್ಡಮತದಾನದ ಸೂಚನೆ ಯಾರಿಗೂ ಇರಲಿಲ್ಲ. ಬಿಜೆಪಿಯ ಮತವಿದ್ದರೂ ಅಧಿಕೃತ ಅಭ್ಯರ್ಥಿಯನ್ನೇ ಗೆಲ್ಲಿಸಲು ಹರಸಾಹಸ ಪಡುವಂತಾಗಿತ್ತು. ಬಿಜೆಪಿಯಲ್ಲೇ ಆರರಿಂದ ಏಳು ಅಡ್ಡ ಮತದಾನದ ಶಂಕೆ ಮೂಡಿದೆ. ಅತೀ ಕಡಿಮೆ ಮತವನ್ನು ಏಳೋರ್ಟ್ ಮಾಡಿದ್ದ ಡಿಕೆಶಿ ಆಪ್ತ ವಿನಯ್ ಕಾರ್ತಿಕ್ ಅತೀ ಹೆಚ್ಚು ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಗೆ ದೊಡ್ಡ ಮರ್ಮಾಘಾತ ನೀಡಿದ್ದಾರೆ. ಡಿಕೆಶಿ ಅಧಿಕಾರ ಪಡೆಯುತ್ತಿದ್ದಂತೆ ಬಿಜೆಪಿಯೊಳಗಡೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ.

ಡಿಕೆಶಿ ಸಿಎಂ ಆಗಿದ್ದೇ ತಡ ಮಠ, ಮಂದಿದ ಸುತ್ತುತ್ತಿದ್ದಾರೆ. ಹಿಂದೂ ವಿರೋಧಿ ಸರಕಾರ ಎಂದು ಬಿಂಬಿಸುತ್ತಿದ್ದ ಬಿಜೆಪಿ ಅಸ್ತ್ರಗಳೆಲ್ಲ ಮೂಲೆ ಸೇರಿಬಿಟ್ಟಿದೆ. ಡಿಕೆಶಿ ತಂತ್ರಗಳ ಎದುರು ಚುನಾವಣೆ ಗೆಲ್ಲುವ ಯಾವುದೇ ರಣತಂತ್ರ ಇದೀಗ ಬಿಜೆಪಿ ಬತ್ತಳಿಕೆಯಲ್ಲಿ ಉಳಿದಂತೆ ಕಾಣುತ್ತಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷರೇ ರಾಜ್ಯಕ್ಕೆ ಬಂದು ಎರಡು ದಿನ ವಾಸ್ತವ್ಯ ಹೂಡಿದರೂ ಬಿಜೆಪಿಯಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ಅಕ್ಷರಶಃ ಬಿಜೆಪಿಯೊಳಗಡೆ ಭಿನ್ನಮತದ ದೊಡ್ಡ ಚಟುವಟಿಕೆಗಳು ಗರಿಗೆದರಿದೆ.

2028 ರಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಪಡೆಯಬೇಕೆನ್ನುವ ಉತ್ಸಾಹಕ್ಕೆ ಡಿಕೆಶಿ ಅವರ ರಣತಂತ್ರ ತಣ್ಣೀರು ಎರಚಿದೆ. ರಾಷ್ಟ್ರ ರಾಜಕಾರಣದಲ್ಲಿ ಬೇರೆ ಪಕ್ಷಗಳು ಹೋಳಾದಂತೆ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಒಡೆದು ಹೋಗುವ ಭೀತಿ ಎದುರಾಗಿದೆ. ಡಿಕೆಶಿ ಶಕ್ತಿಶಾಲಿ ನಾಯಕತ್ವ, ರಣತಂತ್ರದ ಎದುರು ಬಿಜೆಪಿ ಪತರಗುಟ್ಟಿದೆ.