ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಅಧಿಕ; ಪಿ.ಜಿಗಳಲ್ಲಿ ಎಚ್‌ಐವಿ, ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ
ಪಿ.ಜಿಗಳಲ್ಲಿ ಎಚ್‌ಐವಿ ಏಡ್ಸ್ ದಿನದಿಂದ ದಿನಕ್ಕೆ ಏರುತಿದೆ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಚ್‌ಐವಿ ಹೆಚ್ಚಾಗಿದೆ. ಆಘಾತಕಾರಿಯೆಂದರೆ ಹಾಸ್ಟೆಲ್, ಪಿ.ಜಿ ಹಾಗೂ ಗೆಸ್ಟ್ ಹೌಸ್‌ನಲ್ಲಿ ಇರುವವರಲ್ಲಿ ಎಚ್‌ಐವಿ ಹಾಗೂ ಏಡ್ಸ್ ರೋಗ ಕಾಣಿಸಿಕೊಳ್ಳುತ್ತಿದ್ದು. ಈ ರೋಗ ಗಂಭೀರ ಹಂತಕ್ಕೆ ತಲುಪಿದ ಮೇಲೆ ವೈದ್ಯರ ಬಳಿಗೆ ಹೋಗುತ್ತಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟಲ್ ಹಾಗೂ ಪಿ.ಜಿಗಳಲ್ಲಿ ಇರುವ ಹುಡುಗ-ಹುಡುಗಿಯರಲ್ಲಿ ಏಡ್ಸ್ ಹಾಗೂ ಎಚ್‌ಐವಿ ಸೋಂಕು ಹೆಚ್ಚಾಗುತ್ತಿದೆಯಂತೆ. ಇದಕ್ಕೆ ಮುಖ್ಯ ಕಾರಣ ಸಲಿಂಗಕಾಮ.
ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಎಚ್‌ಐವಿ ಸೋಂಕು ಹಾಗೂ ಏಡ್ಸ್ ರೋಗ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣವಾಗಿರುವುದು “ಸಲಿಂಗಕಾಮ” ಕೆಲವು ಪ್ರಮುಖ ಪಿ.ಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಹುಡುಗರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದು ಏಡ್ಸ್ ಹೆಚ್ಚಳಕ್ಕೆ ಕಾರಣವಾಗಿದೆ. ಕಾಲೇಜಿಗೆ ಹೋಗುವ ಹುಡುಗರು, ಊರು ಬಿಟ್ಟು ಬೇರೆ ಊರಿಗೆ ಬಂದು ಕೆಲಸ ಮಾಡುವವರು ಹಾಗೂ ಒಂದೇ ರೂಮ್‌ಗಳಲ್ಲಿರುವ ಹುಡುಗರಲ್ಲಿ ಎಚ್‌ಐವಿ ಹೆಚ್ಚಾಗುತ್ತಿದೆ. ಸಲಿಂಗಕಾಮದಲ್ಲಿ ಸುರಕ್ಷತಾ ವಿಧಾನ ಅನುಸರಿದೆ ಇರುವುದು ಇದಕ್ಕೆ ಕಾರಣವಾಗಿದೆ.

ತುಮಕೂರು ಜಿಲ್ಲೆಯಲ್ಲಿ ಸಲಿಂಗಕಾಮದಿಂದ ಎಚ್‌ಐವಿ ಹಾಗೂ ಏಡ್ಸ್ ಹೆಚ್ಚಳವಾಗುತ್ತಿರುವುದು ವರದಿಯಾಗಿದೆ. ಈ ಭಾಗದಲ್ಲಿನ ಪಿ.ಜಿ ಹಾಗೂ ಹಾಸ್ಟೆಲ್‌ನಲ್ಲಿರುವ ಕೆಲವು ಹುಡುಗರು ಸಲಿಂಗಕಾಮದಲ್ಲಿ ತೊಡಗಿದ್ದಾರೆ. ಸಲಿಂಗಕಾಮದಿಂದ ಏಡ್ಸ್ ಹರಡುತ್ತಿದೆ. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಇರುವುದು ದೃಢಪಟ್ಟಿದೆ. ಎಚ್‌ಐವಿ ಸೋಂಕು ಕಾಣಿಸಿಕೊಂಡ ನೂರು ಜನರಲ್ಲಿ ಹತ್ತು ಜನರಿಗೆ ಸಲಿಂಗಕಾಮವೇ ಕಾರಣ ಎಂದು ಹೇಳಲಾಗಿದೆ.
ಎಚ್ ಐ ವಿ ಸೋಂಕಿನ ಸುಳಿಗೆ ಸುಶಿಕ್ಷಿತರು ಹಾಗೂ ಯುವ ಜನಾಂಗ ಹೆಚ್ಚಾಗಿ ಸಿಲುಕಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಒಟ್ಟು 4,23,369 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಪುರುಷರು 1,82,973, ಮಹಿಳೆಯರು 2,15,519, ಯುವಕರು 87,266 ಹಾಗೂ 10,376 ಯುವತಿಯರಲ್ಲಿ ಸೋಂಕು ಕಂಡುಬಂದಿದೆ. ಎಂಬಿಬಿಎಸ್, ಎಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಹೆಚ್ಚಾಗಿದೆ ಎಂದು ಅಂಕಿ -ಅಂಶಗಳು ಹೇಳುತ್ತವೆ. ರಾಜ್ಯದಲ್ಲಿ ಒಟ್ಟು 12,481 ಯುವಕರು ಹಾಗೂ 10,376 ಯುವತಿಯರು ಎಚ್ ಐ ವಿ ಸೋಂಕಿನಿಂದ ಬಳಲುತ್ತಿದ್ದಾರೆ.
ಸೋಂಕಿತರಲ್ಲಿ ಬೆಂಗಳೂರು ಮೊದಲ ಹಾಗೂ ಬೆಳಗಾವಿ 2 ನೇ ಸ್ಥಾನದಲ್ಲಿವೆ. 3ನೇ ಸ್ಥಾನದಲ್ಲಿ ಬಾಗಲಕೋಟ, 4ನೇ ಸ್ಥಾನದಲ್ಲಿ ಗಡಿನಾಡು ಬಳ್ಳಾರಿ ಹಾಗೂ 5ನೇ ಸ್ಥಾನದಲ್ಲಿ ವಿಜಯಪುರ ಇದ್ದರೆ, ಕೊನೆ ಸ್ಥಾನದಲ್ಲಿ ಕೊಡಗು ಇದೆ.

ಯುವಕರಲ್ಲಿ ಎಚ್‌ಐವಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದು 18 ರಿಂದ 25 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗಿದೆ. ದಕ್ಷಿಣ ಕನ್ನಡದಲ್ಲಿ, ಜನವರಿಯಿಂದ ಆಗಸ್ಟ್ 17, 2023 ರವರೆಗೆ 130 ಹೊಸ HIV/AIDS ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 17 MSM ಪ್ರಕರಣಗಳಾಗಿವೆ. ಆಗಸ್ಟ್ ತಿಂಗಳಿನ 17 ದಿನಗಳಲ್ಲಿ ಯುವಕರಲ್ಲಿ ಐದು ಪ್ರಕರಣಗಳು ಕಂಡುಬಂದಿದೆ. ಇದು ಸರ್ಕಾರಿ ಆಸ್ಪತ್ರೆಗಳು ನೀಡಿರುವ ಅಂಕಿ-ಅಂಶಗಳು. ಖಾಸಗಿ ಆಸ್ಪತ್ರೆಗಳ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಯುವ ಜನಾಂಗದಲ್ಲೇ HIV ಸೋಂಕು ಹೆಚ್ಚಾಗಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಮಾತ್ರವಲ್ಲದೆ ವಿಧ್ಯಾವಂತರಲ್ಲೇ ಈ ಸೋಂಕು ಅಧಿಕ ಕಂಡುಬರುತ್ತದೆ. MBBS, ಇಂಜಿನಿಯರಿಂಗ್, ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಹೆಚ್ಚಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಬಿಹಾರದ ಜಿಲ್ಲೆಯೊಂದರಲ್ಲಿ ಎಚ್‌ಐವಿ ಏಡ್ಸ್ ಭೀತಿ ಎದುರಾಗಿ ಅ ಜಿಲ್ಲೆಯಲ್ಲಿ ರೋಗ ವೇಗವಾಗಿ ಹರಡುತ್ತಿದ್ದು, ಕಳೆದ 30 ವರ್ಷಗಳಲ್ಲಿ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 3583 ಪ್ರಕರಣಗಳು ವರದಿಯಾಗಿವೆ.
