ಬಂಟ್ವಾಳ: ಸ್ಟುಡಿಯೋ ಮಾಲಿಕನ ಕೊಲೆ ಯತ್ನ ಪ್ರಕರಣ: ನಾಲ್ವರು ಆರೋಪಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ, 88 ಸಾವಿರ ರೂ. ದಂಡ.

ಕರಾವಳಿ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ, ದಿನಾಂಕ 28.10.2020 ರಂದು ಸಂಜೆ, ಸ್ಟುಡಿಯೋ ಒಂದರ ಮಾಲಿಕರಾದ ದಿನೇಶ್ ಎಂಬವರು ತನ್ನ ಸ್ಟುಡಿಯೋದಲ್ಲಿದ್ದಾಗ ಪೂರ್ವಧ್ವೇಶದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ಸ್ಟುಡಿಯೋಗೆ ಅಕ್ರಮವಾಗಿ ನುಗ್ಗಿ ದಿನೇಶ್ ಎಂಬವರನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2020 ರಂತೆ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ ಪ್ರಸನ್ನ ಎಮ್. ಎಸ್ ರವರು ಆರೋಪಿಗಳಾದ ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ (ಮುನ್ನಿ) ಹಾಗೂ ಮಹಮ್ಮದ್ ಸವಾದ ಎಂಬವರುಗಳನ್ನು ದಸ್ತಗಿರಿ ಮಾಡಿ ಸದ್ರಿ‌ ಆರೋಪಿಗಳ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ದಿನಾಂಕ 28.10.2026 ರಂದು ನಾಲ್ವರು ಆರೋಪಿಗಳಿಗೂ 7 ವರ್ಷಗಳ ಜೈಲು ಶಿಕ್ಷೆ ಮತ್ತು 88 ಸಾವಿರ ದಂಡ ವಿಧಿಸಿರುತ್ತದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ನಾಯಕ್ ರವರು ಸಮರ್ಥವಾಗಿ ವಾದಿಸಿರುತ್ತಾರೆ.