ಕೆನರಾ ಲೈಟಿಂಗ್ ಇಂಡಸ್ಟ್ರಿ ಪುನರೂರು ಇದರ ನಿರ್ದೇಶಕರ ವಿರುದ್ದದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ.

ಕರಾವಳಿ

ಮೂಲ್ಕಿ ಪುನರೂರು ಸಮಿಪದ ಕೆನರಾ ಲೈಟಿಂಗ್ ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರ ವಿರುಧ್ದ ಮೂಡಬಿದ್ರೆ ಹಿರಿಯ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ಸಂಖ್ಯೆ 22/2024 ಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಪ್ರಕರಣದ ದೂರುದಾರ ಕಂಪನಿಯ ಉದ್ಯೋಗಿ ಕಿನ್ನಿಗೋಳಿ ನಿವಾಸಿ ಮೆಲ್ವಿನ್ ಎಂಬವವರು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕಂಪನಿಯ ನಿರ್ದೆಶಕರ ವಿರುದ್ದ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ತನಿಖೆ ಸರಿಯಾಗಿ ನಡೆಯದ ಕಾರಣ ಮೂಡಬಿದ್ರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಕ್ರಮ ಸಂಖ್ಯೆ 140/21 ರಂತೆ ಭಾರತ ದಂಡ ಸಂಹಿತೆ ಕಲಂ 447, 504, 506 ಮತ್ತು 392 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಸಾಕ್ಶ್ಯದಾರದ ಕೊರತೆ ಎಂಬ ಕ್ಷುಲ್ಲಕ ಕಾರಣ ನೀಡಿ ಪ್ರಕರಣಕ್ಕೆ ಅಂತಿಮ ವರದಿ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಪುನಃ ಕೋರ್ಟ್ ಮೆಟ್ಟಿಲೇರಿದ್ದರು. ದೂರುದಾರರ ವಾದವನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯ ಖಾಸಗಿ ದೂರು ಸಂಖ್ಯೆ 19/2023 ರ ಅಡಿಯಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ಕಂಪೆನಿ ನಿರ್ದೇಶಕರಾದ ಅಜಿತ್ ಖರೆ, ಕಿರಣ್ ಖರೆ ಹಾಗು ನೇಹ ಖರೆಯವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ಮೂಡಬಿದ್ರೆ ಕೋರ್ಟಿನ ಮಧ್ಯಂತರ ಆದೇಶ ಪ್ರಶ್ನಿಸಿ ಕಂಪನಿ ನಿರ್ದೇಶಕರು ಹೈಕೊರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಇದೇ ಕಂಪನಿಯ ಮಾಲಿಕರು ಈ ಹಿಂದೆ ಹಲವು ಉದ್ಯೋಗಿಗಳನ್ನು ವಿನಾಃಕಾರಣ ಕೆಲಸದಿಂದ ವಜಾಗೊಳಿಸಿ ಬಾಕಿ ಸಂಬಳ ನೀಡದೆ ಕಿರುಕುಳ ನೀಡುತ್ತಿದ್ದು ಅಂತಃ ಕೆಲವು ಪ್ರಕರಣಗಳು ಈಗಾಗಲೇ ಮೂಡಬಿದ್ರೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಮತೋರ್ವ ಮಹಿಳಾ ಉದ್ಯೋಗಿಯ ವಿಚಾರ ಹೈಕೋರ್ಟ್ ನಲ್ಲಿ ವಿಚಾರಣೆ ಆಗಿದ್ದು, 2018 ರಿಂದ ಇಲ್ಲಿಯವರೆಗೆ ಎಲ್ಲಾ ಬಾಕಿ ಇರುವ ಸಂಬಳ/ ಭತ್ಯೆ ತುಂಬಿಕೊಟ್ಟು ಮರು ನೇಮಕಾತಿ ಮಾಡಬೇಕಾಗಿ ಅದೇಶಿಸಿದ್ದು, ಕೋರ್ಟಿನ ಆದೇಶ ಉಲ್ಲಂಘನೆಗೆ ಕಂಪನಿಯ ಆಡಳಿತ ನಿರ್ದೇಶಕರಿಗೆ ಜಾಮೀನು ರಹಿತ ವಾರಂಟ್ ಕೂಡ ಜಾರಿಯಾಗಿರುತ್ತದೆ.

ದೂರುದಾರರ ಪರವಾಗಿ N.K. Associatetes ಮಂಗಳೂರು ಇದರ ಮುಖ್ಯಸ್ಥರು, ನ್ಯಾಯವಾದಿಗಳಾದ ನವೀನ್ ಜಿ ಮತ್ತು ಕುಮಾರ್ ಸತ್ಯನಾರಾಯಣ ರವರು ವಾದ ಮಂಡಿಸಿದ್ದರು.