ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿ, ನಾಲ್ಕು ತಿಂಗಳ ಗರ್ಭಿಣಿಯಾದ ಮೇಲೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ; ಆರೋಪಿಗಳ ಬಂಧನ

ರಾಜ್ಯ

ಕೊಲೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಪೋಕ್ಸೊ, ಬಾಲ್ಯ ವಿವಾಹ, ಅತ್ಯಾಚಾರ, ಮಾನಸಿಕ ಹಿಂಸೆ, ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬಾಲಕಿಯನ್ನು ಮದುವೆಯಾದ ಸಾಹಿಲ್‌ ಕುತುಬುದ್ದಿನ್‌ ಬಾಗವಾನ, ಇವರ ಸಂಬಂಧಿ ಫರೀದಾ ಕುತುಬುದ್ದಿನ್‌ ಬಾಗವಾನ, ಕುತುಬುದ್ದಿನ್‌ ಬಾಗವಾನ, ಸಲ್ಮಾನ್‌ ಕುತುಬುದ್ದಿನ್‌ ಬಾಗವಾನ, ಅಬ್ಬಾಸ್‌ ಅಬ್ದುಲ್ ಹಮೀದ್‌ ಢೋಣಿ, ಸುಮಯ್ಯಾ ಅಬ್ಬಾಸ್‌ ಡೋಣಿ ಹಾಗೂ ಮದುವೆ ಮಾಡಿದ ಮೌಲ್ವಿಯನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದೆ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗಿತ್ತು. ನಂತರ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಆಗಿದ್ದು ಮಾರ್ಚ್‌ನಲ್ಲಿ ಗೊತ್ತಾಯಿತು. ಅವರಿಗೆ ಅಡುಗೆ, ಮನೆಗೆಲಸ ಮಾಡಲು ಬರುವುದಿಲ್ಲ ಎಂದು ಆರೋಪಿಗಳು ದಿನವೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಮಾರ್ಚ್‌ 3ರಂದು ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುರೇಖಾ ಶಿವಪ್ಪ ಹಂಚಿನಮನಿ ಪೊಲೀಸರಿಗೆ ದೂರು ನೀಡಿದ್ದಾರೆ.