ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 19 ಮಂದಿ ರೌಡಿ ಶೀಟರ್ ಗಳನ್ನು ಗಡಿಪಾರುಗೊಳಿಸಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಆದೇಶಿಸಿದ್ದಾರೆ.
ಮೂಡುಬಿದಿರೆಯ ಅತ್ತೂರು ನಸೀಬ್, ಕಾಟಿಪಳ್ಳದ ಶ್ರೀನಿವಾಸ್ ಎಚ್, ಬಜಪೆ ಶಾಂತಿಗುಡ್ಡದ ಮುಹಮ್ಮದ್ ಸಫ್ವಾನ್, ಬೋಂದೆಲ್ ನ ಜಯೇಶ್ ಯಾನೆ ಸಾಚು, ನೀರುಮಾರ್ಗ ಭಟ್ರಕೋಡಿಯ ವರುಣ್ ಪೂಜಾರಿ, ಅಶೋಕನಗರದ ಮುಹಮ್ಮದ್ ಅಝೀಝ್, ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ, ಕೈಕಂಬ ಗಣೇಶಪುರದ ದೀಕ್ಷಿತ್ ಪೂಜಾರಿ, ಕೃಷ್ಣಾಪುರದ ಲಕ್ಷ್ಮೀಶ ಉಳ್ಳಾಲ, ಬೊಂಡಂತಿಲದ ಕಿಶೋರ್ ಸನಿಲ್, ಉಳ್ಳಾಲ ಕೋಡಿಯ ಹಸೈನಾರ್ ಸೈಯದ್ ಆಲಿ, ಕುದ್ರೊಳಿ ಕರ್ಬಲಾ ರಸ್ತೆಯ ಅಬ್ದುಲ್ ಜಲೀಲ್, ಬೋಳೂರಿನ ರೋಶನ್ ಕಿಣಿ, ಕಸಬಾ ಬೆಂಗರೆಯ ಅಹಮ್ಮದ್ ಸಿನಾನ್, ಜಪ್ಪಿನಮೊಗರಿನ ದಿತೇಶ್ ಕುಮಾರ್, ಬಜಾಲ್ ಕುತ್ತಡ್ಕದ ಗುರುಪ್ರಸಾದ್, ಮತ್ತು ಭರತ್ ಪೂಜಾರಿ, ಜಪ್ಪು ಕುಡುಪಾಡಿಯ ಸಂದೀಪ್ ಶೆಟ್ಟಿ ಗಡಿಪಾರು ಆದೇಶಕ್ಕೆ ಒಳಗಾದ ರೌಡಿಶೀಟರ್ ಗಳು.
ಈ ರೌಡಿಶೀಟರ್ ಗಳ ವಿರುದ್ಧ ನಾನಾ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ದಿನಗಳಲ್ಲಿ 19 ರೌಡಿ ಶೀಟರ್ ಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದ್ದರೆ, ಈ ತಿಂಗಳ ಆರಂಭದಲ್ಲಿ 7 ರೌಡಿ ಶೀಟರ್ ಗಳ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆರೋಪಿಗಳನ್ನು ನಾನಾ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ. 367 ಮಂದಿಯ ವಿರುದ್ಧ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
