ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ; ಇದು ಕೋವಿಡ್‌ ಗಿಂತಲೂ ಮಾರಕವಾಗಿ ಇಡೀ ಜಗತ್ತನ್ನೇ ಕಾಡಲಿದೆ: ಅಮೆರಿಕದ ತಜ್ಞರ ಎಚ್ಚರಿಕೆ

ಅಂತಾರಾಷ್ಟ್ರೀಯ

ಆತಂಕಕಾರಿ ಬೆಳವಣಿಗೆಯಲ್ಲಿ ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ ಇದೆ. ಇದು ಕೋವಿಡ್‌ ಗಿಂತಲೂ ಡೇಂಜರ್ ಆಗಿ ಜಗತ್ತನ್ನೇ ಕಾಡಲಿದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಇದೀಗ H5N1 ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಒಟ್ಟು 6 ರಾಜ್ಯಗಳ ಸಾಕು ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸುಮಾರು ಹಸುಗಳಲ್ಲಿ ಮತ್ತು ಅವುಗಳ ಪಾಲಕರಲ್ಲಿ H5N1 ಪಾಸಿಟಿವ್‌ ಬಂದಿದೆ. ಕೆಲವು ಬೆಕ್ಕುಗಳಲ್ಲೂ ಈ ಖಾಯಿಲೆ ಕಾಣಿಸಿಕೊಂಡಿದೆ.

ಈ ಸೋಂಕು ರೂಪಾಂತರಿಯಾಗುತ್ತಾ ಬಹಳ ಸುಲಭವಾಗಿ ಮನುಷ್ಯರಿಗೆ ಹರಡುತ್ತಿದೆ ಎಂದು ಅಮೇರಿಕದ ತಜ್ಞರು ಹೇಳಿದ್ದಾರೆ. ಸದ್ಯ ಸಸ್ತನಿಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಈ ಖಾಯಿಲೆಗೆ ತುತ್ತಾದವರ ಸಂಖ್ಯೆ ಸಾವಿರ ದಾಟಿದೆ. ಇದು ರೂಪಾಂತರಗೊಳ್ಳುತ್ತಿರುವುದರಿಂದ ಕೋವಿಡ್‌ನಂತೆ ಡೆಡ್ಲಿ ಆಗೋ ಲಕ್ಷಣ ಕಂಡು ಬರುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹಕ್ಕಿ ಜ್ವರದ ಸಾಧಾರಣ ಮರಣ ಪ್ರಮಾಣ ಮುಂದುವರಿದರೆ ಕೋವಿಡ್‌ಗಿಂತ ಬರೋಬ್ಬರಿ 100% ಡೆಡ್ಲಿ ಆಗೋ ಲಕ್ಷಣ ಕಾಣುತ್ತಿದೆ ಎಂದಿದ್ದಾರೆ.

WHO ಪ್ರಕಾರ ಈಗಾಗಲೇ ಹಕ್ಕಿ ಜ್ವರದ ಮರಣ ಪ್ರಮಾಣ 52% ಇದೆ. ಅಂದರೆ 100 ಜನರಿಗೆ ಹಕ್ಕಿ ಜ್ವರ ಕಾಣಿಸಿಕೊಂಡರೆ 52 ಜನ ಪ್ರಾಣ ಜೀವಕಳಕೊಳ್ಳುತ್ತಾರೆ. 2020ರಲ್ಲಿ H5N1ನ ಹೊಸ ರೂಪಾಂತರಿಗೆ ತುತ್ತಾದವರ ಪೈಕಿ 30% ಜನ ಮರಣ ಹೊಂದಿದರು. ಇದೇ ಕಾರಣಕ್ಕೆ ಈಗ ಅಮೆರಿಕ ಬಹಳ ಅಲರ್ಟ್‌ನಲ್ಲಿದೆ. ಸೋಂಕು ಹೆಚ್ಚಾದರೆ ಮೊದಲು ಪ್ರಾಣಿ, ಕೋಳಿ, ಹಸುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದ್ರಿಂದ, ಕೋಳಿ ಸಾಕಾಣಿಕೆ ಹಾಗೂ ಡೈರಿ ಇಂಡಸ್ಟ್ರಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಅಂತ ವಿಶ್ಲೇಷಿಸಲಾಗ್ತಿದೆ. ಇನ್ನು ಇದ್ದಕ್ಕಿದ್ದಂತೆ ಅಮೆರಿಕದಲ್ಲಿ ಈ ರೀತಿ ಹಕ್ಕಿಜ್ವರ ಬಿಗಡಾಯಿಸೋಕೆ ವಲಸೆ ಜಲಪಕ್ಷಿಗಳಾದ ಬಾತುಕೋಳಿಗಳು ಕಾರಣ ಅಂತ ಹೇಳಲಾಗ್ತಿದೆ. ಟೆಕ್ಸಾಸ್‌ನ ಕೋಳಿ ಫಾರ್ಮ್‌ ಒಂದರಲ್ಲಿ ಹಕ್ಕಿ ಕಾಣಿಸಿಕೊಂಡ ಕಾರಣ ಆ ಪಾರ್ಮಿನ ಸರಿಸುಮಾರು 16 ಲಕ್ಷ ಕೋಳಿಗಳನ್ನು ಹತ್ಯೆಮಾಡಲಾಗಿದೆಯಂತೆ.