‘ಟಾಟಾ ಸಮೂಹವನ್ನು ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಈ ಬಗ್ಗೆ ಯಾವ ಉದ್ಯಮಿಯೂ ಸೊಲ್ಲೆತ್ತುತ್ತಿಲ್ಲ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಟಾಟಾ ಸಮೂಹದ ಟಾಟಾ ಸನ್ಸ್ ನಾಯಕತ್ವದ ವಿಚಾರದಲ್ಲಿ ಸಂಘರ್ಷ ಮತ್ತು ವಿವಾದ ಉಂಟಾಗಿರುವ ಹೊತ್ತಿನಲ್ಲಿ ರಾಹುಲ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಟಾಟಾ ಸಮೂಹವನ್ನು ವ್ಯವಸ್ಥಿತ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಯಾವ ಉದ್ಯಮಿ ಕೂಡ ಈ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ. ಎಷ್ಟು ಸಮಯದವರೆಗೆ ನೀವು ಮೌನವಾಗಿರುತ್ತೀರಿ? ನಿಮ್ಮನ್ನು ಅವರು ಆಳುವವರೆಗಾ? ಭಾರತದ ಉದ್ಯಮಗಳು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಟಿಕೆಗಳಲ್ಲ’ ಎಂದಿದ್ದಾರೆ
