ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜುಲೈ 22 ರಿಂದ ಅಬುಧಾಬಿಗೆ ಪ್ರತಿದಿನ ಏರ್ ಇಂಡಿಯಾ ವಿಮಾನ ಹಾರಾಟ ನಡೆಯಲಿದೆ. ಅಬುಧಾಬಿಗೆ ವಾರಕ್ಕೆ 4 ದಿನಗಳ ಕಾಲ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಜುಲೈ 22 ರಿಂದ ಪ್ರತಿದಿನ ಹಾರಾಟ ನಡೆಸಲಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಹಾರಾಟ ನಡೆಸುತ್ತಿದ್ದು, ಇದೀಗ ಮೂರು ವಿಮಾನಗಳ ಹೆಚ್ಚುವರಿ ಸೇರ್ಪಡೆಯೊಂದಿಗೆ ಪ್ರತಿದಿನ ಹಾರಾಟ ನಡೆಸಲಿದೆ.
