ಪೊಳಲಿ ಅನಂತು ಶವಯಾತ್ರೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪಿ ಖಾಕಿ ಬಲೆಗೆ

ಕರಾವಳಿ

ನ್ಯಾಯಾಲಯಕ್ಕೆ ಹಾಜರಾಗದೆ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮನೋಜ್ ಅರೆಸ್ಟ್

2005 ರಲ್ಲಿ ಕೈಕಂಬ ಪೊಳಲಿ ದ್ವಾರದ ಬಳಿ ಹತ್ಯೆಯಾದ ಪೊಳಲಿ ಅನಂತು ಎಂಬಾತನ ಶವ ಮೆರವಣೆಗೆಯ ಸಮಯ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರೋಪಿ ಮನೋಜ್, 2ನೇ ಅವಿನ್ಯೂ, ಎನ್.ಎಂ.ಪಿ.ಟಿ ಕಾಲೋನಿ, ಮಂಗಳೂರು ಎಂಬಾತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 101/2005 ರಂತೆ ಕೆ.ಪಿ.ಡಿ.ಎಲ್.ಪಿ ಆಕ್ಟ್ (ಮಾನ್ಯ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ, ಮಂಗಳೂರು ಸಿ.ಸಿ.ನಂಬ್ರ: 4048/2007 ) ಮತ್ತು ಬಜಪೆ ಠಾಣಾ ಅ.ಕ್ರ: 104/2005 (ಮಾನ್ಯ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳೂರು ಸಿ.ಸಿ.ನಂಬ್ರ: 4049/2007 ) ರಂತೆ ಪ್ರಕರಣ ದಾಖಲಾಗಿತ್ತು . ಆದರೆ ಪ್ರಕರಣದ ಆರೋಪಿ ಮನೋಜ್ ಎಂಬಾತ 2007 ರಲ್ಲಿ ವಿದೇಶಕ್ಕೆ ತೆರಳಿದ್ದು, ನಂತರ ವಿದೇಶದಿಂದ ಬಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ, ಕೌಡೂರು ಗ್ರಾಮದ ರಂಗನ ಪಲ್ಕೆ ಯಲ್ಲಿ ವಾಸವಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈತನ ವಿರುದ್ಧ ನ್ಯಾಯಾಲಯವು ಅ.ಕ್ರ. 101/2005 ಪ್ರಕರಣದಲ್ಲಿ LPC No: 26/2016 ಮತ್ತು ಅ.ಕ್ರ. 104/2005 ಪ್ರಕರಣದಲ್ಲಿ LPC No: 50/2016 ರಂತೆ ಎಲ್.ಪಿ.ಸಿ ವಾರಂಟ್ ಜಾರಿಗೊಳಿಸಿತ್ತು.

ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ನವೆಂಬರ್ 14 ರಂದು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಗಾಗಿ ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.