ದೊಡ್ಡಗೌಡರ ಕುಟುಂಬ ಸುತ್ತ ದಿನಕ್ಕೊಂದರಂತೆ ಲೈಂಗಿಕ ಕಿರುಕುಳದ ಹಗರಣ ಸುತ್ತುತ್ತಿದೆ

ರಾಜ್ಯ

ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸೂರಜ್ ನನ್ನು ಸಂತ್ರಸ್ತನ ದೂರು ಆಧರಿಸಿ ಬಂಧನ

ದೇವೇಗೌಡರ ಕುಟುಂಬ ಮೇಲೆ ದಿನಕ್ಕೊಂದರಂತೆ ಲೈಂಗಿಕ ಕಿರುಕುಳದ ಹಗರಣ ಸುತ್ತುತ್ತಿದೆ. ಇದೀಗ ಮೊಮ್ಮಗ, ರೇವಣ್ಣರ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣರವರನ್ನು ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಹೊಳೇನರಸಿಪುರದಲ್ಲಿ ದಾಖಲಾಗಿದ್ದ ಸಲಿಂಗ ಕಾಮ ಆರೋಪದಡಿ ಕೇಸ್ ದಾಖಲಾದ ನಂತರ, ಬೆಂಗಳೂರಿನ ಕಡೆ ಹೋಗಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸೂರಜ್ ನನ್ನು ಸಂತ್ರಸ್ತನ ದೂರು ಆಧರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ ಯೋಜನೆ ಹಾಕಿದ್ದರು ಎನ್ನಲಾಗಿದ್ದು, ಸೂರಜ್ ರೇವಣ್ಣ ನನ್ನು ಮಾರ್ಗ ಮಧ್ಯೆ ವಶಕ್ಕೆ ಪಡೆದ ಪೊಲೀಸರು ಹಾಸನಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸೂರಜ್ ರೇವಣ್ಣ ತಾಯಿ ಭವಾನಿ ರೇವಣ್ಣ, ಶಾಸಕ ಹೆಚ್. ಡಿ. ರೇವಣ್ಣ ಅವರು ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಜಾಮೀನು ಪಡೆದು ಹೊರಗಡೆ ಇದ್ದಾರೆ. ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಜೊತೆಗಿನ ರಾಸಲೀಲೆ ಪ್ರಕರಣ ಸಂಬಂಧ ಜೈಲಿನಲ್ಲಿ ಇದ್ದಾರೆ. ಈಗ ಸೂರಜ್ ರೇವಣ್ಣ ಅರೆಸ್ಟ್ ಆಗಿದ್ದು, ಇಡೀ ಕುಟುಂಬವೇ ಕಾನೂನು ಮುಷ್ಠಿಯಲ್ಲಿ ಸಿಲುಕಿದೆ.

ಸೂರಜ್ ರೇವಣ್ಣ ಹಾಗೂ ಸಂತ್ರಸ್ತ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಈಗಾಗಲೇ ನನ್ನ ಕುಟುಂಬ ಮುಜುಗರಕ್ಕೀಡಾಗಿದ್ದು, ನನ್ನ ಕುಟುಂಬಕ್ಕೆ ಧಕ್ಕೆಯಾಗಿದೆ. ಈ ಕಾರಣಕ್ಕೆ ನೀನು ಹೊರಗಡೆ ಮಾತನಾಡಬೇಡಾ. 2 ಕೋಟಿ
ರೂಪಾಯಿ ನೀಡುತ್ತೇನೆ, ಜೊತೆಗೆ ಸರ್ಕಾರಿ ಕೆಲಸ ನೀಡಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎನ್ನಲಾದ ಸೂರಜ್ ರೇವಣ್ಣರ ಆಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಸಂತ್ರಸ್ತನಿಗೆ ಕಳುಹಿಸಿರುವ ವ್ಯಾಟ್ಸಪ್ ಮೆಸೇಜ್ ವೈರಲ್ ಆಗಿದ್ದು, ಇದರಲ್ಲಿ ಯುವಕನಿಗೆ ಲವ್ ಯೂ ಸಿಂಬಲ್ ಅನ್ನು ಸೂರಜ್ ಕಳುಹಿಸಿರುವುದು ಪತ್ತೆಯಾಗಿದೆ.

ಮಹಿಳೆಯರು, ಯುವತಿಯರ ಜೊತೆಗಿನ ಪ್ರಜ್ವಲ್ ರೇವಣ್ಣರ ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ದೇವೇಗೌಡ ಕುಟುಂಬ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಮರ್ಯಾದೆಗೆ ಧಕ್ಕೆ ಆಗಿತ್ತು. ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸುದ್ದಿ ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು. ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಈಗಾಗಲೇ ಹೆಚ್. ಡಿ. ರೇವಣ್ಣ ಜೈಲಿಗೆ ಹೋಗಿ ಬಂದದ್ದು ಆಗಿದೆ. ಭವಾನಿ ರೇವಣ್ಣರಿಗೆ ಜಾಮೀನು ಸಿಕ್ಕ ಕಾರಣ ಕೂದಲೆಳೆ ಅಂತರದಲ್ಲಿ ಬಂಧನದಿಂದ ಬಚಾವಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ. ಕುಟುಂಬವೇ ಈಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮುಜುಗರಕ್ಕೀಡಾಗಿದೆ. ಪ್ರಜ್ವಲ್ ಸಹೋದರ, ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ
ಕೂಡ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಅದೂ ಯುವಕನಿಗೆ ರಾಸಲೀಲೆ ಕರೆದಿರುವುದು. ಮಾತ್ರವಲ್ಲ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸದ್ದು ಮಾಡಿದೆ.