ಕಾಟಿಪಳ್ಳ ಮಸೀದಿಗೆ ಕಲ್ಲೆಸೆದ ಪ್ರಕರಣ.. ಐವರು ಕಿಡಿಗೇಡಿಗಳ ಬಂಧಿಸಿದ ಸುರತ್ಕಲ್ ಪೊಲೀಸರು.

ಕರಾವಳಿ

ಸುರತ್ಕಲ್ ಕಾಟಿಪಳ್ಳ ಮಸೀದಿಗೆ ಬೈಕಿನಲ್ಲಿ ಬಂದು ಕಲ್ಲೆಸೆದ ಪ್ರಕರಣದ
ಐವರು ಕಿರಾತಕರನ್ನು ಸುರತ್ಕಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲೋನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರದ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಬಂಧಿತ ದುಷ್ಕರ್ಮಿಗಳು.
ಆರೋಪಿಗಳ ಪೈಕಿ ಭರತ್ ಎಂಬಾತನ ವಿರುದ್ಧ ಹೊಡೆದಾಟಕ್ಕೆ ಸಂಬಂಧಿಸಿ ಈ ಹಿಂದೆ 307 ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಕಳೆದ ರಾತ್ರಿ ಎರಡು ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದು ಪರಾರಿಯಾಗಿದ್ದರು. ಎರಡು ಬೈಕುಗಳ ಸಹಿತ ಐವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.