ಮೂಡ ಪ್ರಕರಣದಲ್ಲಿ ಸುಳ್ಳನ್ನೆ ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದ ಬಿ.ಜೆ.ಪಿ.,ಜೆ.ಡಿ.ಎಸ್ ಪಕ್ಷಗಳ ಭ್ರಷ್ಠ ನಾಯಕರ ಮುಖವಾಡ ಕಳಚುವ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದು, ಪತಿಯ ಈ ನಿರ್ಧಾರಕ್ಕೆ ಅವರ ಪತ್ನಿ ಪಾರ್ವತಿಯವರು ಕೈಜೋಡಿಸಲು ತಾವು ಪಡೆದಿದ್ದ 14 ನೀವೇಶನಗಳನ್ನು ಮೂಡಾಕ್ಕೆ ಮರಳಿಸಿದ್ದಾರೆ. ಆದರೆ ಈಗ ಬಿ.ಜೆ.ಪಿ, ಜೆ.ಡಿ.ಎಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತಮ್ಮ ಅಕ್ರಮ ಜಮೀನು, ನಿವೇಶನಗಳನ್ನು ಯಾವಾಗ ವಾಪಾಸ್ ಮಾಡುವರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ಮಿತಿಮೀರಿ ಹೋಗಿರುವ ಭ್ರಷ್ಠಾಚಾರ ನಿರ್ಮೂಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಪಕ್ಷ ಕರ್ನಾಟಕದಿಂದಲೆ ಆರಂಬಿಸಿದ್ದು, ಇದರ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಮೂಡ ನಿರ್ಲಕ್ಷೆತೆಯಯಿಂದ ಕಳೆದುಕೊಂಡಿದ್ದ ಭೂಮಿಗೆ ಯಾವುದೆ ಪ್ರಭಾವ ಬೀರದೆ ಕಾನೂನು ಬದ್ದವಾಗಿಯೆ ನೀವೇಶನಗಳನ್ನು ಪಡೆದಿದ್ದರು. ಆದರೂ ಸುಳ್ಳನ್ನೆ ಸಾವಿರ ಬಾರಿ ಹೇಳಿ ಸತ್ಯ ಮಾಡುವ ಸಿದ್ದಾಂತದಲ್ಲಿ ಹೆಚ್ಚು ನಂಬಿಕೆ ಹೊಂದಿರುವ ಬಿ.ಜೆ.ಪಿ., ಜೆ.ಡಿ.ಎಸ್ ಪಕ್ಷಗಳು ನಿವೇಶನಗಳ ವಿಷಯದಲ್ಲಿ ಬಹುದೊಡ್ಡ ಗುಲ್ಲೆಬ್ಬಿಸಿದ್ದರಿಂದ ಪಾರ್ವತಿಯವರು ತಾವು ಪಡೆದಿದ್ದ ನಿವೇಶನಗಳನ್ನು ಮರಳಿಸುವ ಮೂಲಕ ದೇಶದಲ್ಲಿ ಮಿತಿಮೀರಿರುವ ಭ್ರಷ್ಠಾಚಾರ ನಿರ್ಮೂಲನೆಗೆ ರಾಜ್ಯದಿಂದಲೇ ಆರಂಭಿಸಿದ್ದಾರೆ. ಇದು ವಿರೋಧ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಲಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಕುಟುಕಿದ್ದಾರೆ.

ಕಾಂಗ್ರೇಸ್ ಪಕ್ಷ ಕಳೆದ 65 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದರೂ ರಾಜ್ಯಧಾನಿಯಲ್ಲೆ ಒಂದು ಸುಸಜ್ಜಿತವಾದ ಸ್ವಂತ ಕಛೇರಿಯನ್ನು ಹೊಂದಲಾಗಿಲ್ಲ. ಬಿ.ಜೆ.ಪಿ.ಯಂತೆ ಸಾವಿರಾರು ಕೋಟಿ ರೂಪಾಯಿಗಳ ಸ್ವಂತ ಕಛೇರಿಯನ್ನು ಹೊಂದಲಾಗಿಲ್ಲ. ಹೀಗಿದ್ದರೂ, ನಿಯಮಾನುಸಾರ ಪಡೆದಿದ್ದ ನಿವೇಶನಗಳ ವಿಷಯದಲ್ಲಿ ರಾಜ್ಯಪಾಲರು ಕಾನೂನು ಕ್ರಮಕ್ಕೆ ಅನುಮತಿ ನೀಡಿದ್ದನ್ನೆ ನೆಪವಾಗಿ ಇಟ್ಟಿಕೊಂಡು ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಪಕ್ಷವನ್ನು ಹಣಿಯುವ ಕುತಂತ್ರ ಮಾಡಲಾಗಿದೆ. ಇದರಲ್ಲಿ ತಾತ್ಕಾಲಿಕವಾಗಿ ಜಯಗಳಿಸಿದಂತ್ತಿದ್ದರೂ ಅಂತಿಮ ಜಯವು ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಪಕ್ಷದ್ದೆ ಆಗಲಿದೆ ಎಂದು ವೈ.ಬಿ.ಚಂದ್ರಕಾಂತ್ ಅವರು ಸವಾಲ್ ಹಾಕಿದ್ದಾರೆ.
ಬಿ.ಜೆ.ಪಿ., ಜೆ.ಡಿ.ಎಸ್ ಪಕ್ಷಗಳು ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮೂಡಾ ಪ್ರಕರಣವನ್ನು ವೈಭವಿಕರಿಸಿದ್ದರಿಂದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ತಾವು ಪಡೆದಿದ್ದ ನಿವೇಶನಗಳನ್ನು ವಾಪಾಸ್ ಕೊಟ್ಟಾಗಿದೆ. ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಕೆ.ಎಸ್. ಈಶ್ವರಪ್ಪ, ಬಿ.ಜೆ.ಪಿ, ಜೆಡಿ.ಎಸ್ ನಾಯಕರು ಸಹ ತಮ್ಮ ಅಕ್ರಮ ಆಸ್ತಿಗಳನ್ನು ಸರ್ಕಾರಕ್ಕೆ ಮರಳಿಸುವ ಪ್ರಾಮಾಣಿಕ ಬದ್ದತೆಯನ್ನು ತೋರಿಸಲಿ ಎಂದು ವೈ.ಬಿ.ಚಂದ್ರಕಾಂತ್ ಅವರು ಸವಾಲ್ ಹಾಕಿದ್ದಾರೆ.
