ಚಾಲಕನ ನಿಯಂತ್ರಣ ಕಳೆದುಕೊಂಡ THAR ಜೀಪೊಂದು ರಸ್ತೆ ಬದಿಯ
ಪಾರ್ಕಿಂಗ್ ಸ್ಥಳದಲ್ಲಿದ್ದ ಎರಡು ಆಟೋಗಳು, ಮೂರು ಬೈಕುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ ಘಟನೆ ಮೆಲ್ಕಾರ್-ಮುಡಿಪು ರಸ್ತೆಯ ಸಜಿಪದಲ್ಲಿ ಇದೀಗ ನಡೆದಿದೆ.

ಆಟೋ ಚಾಲಕರು, ಬೈಕುಗಳ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಅಂಗಡಿಗೆ ಹೋಗಿದ್ದ ಕಾರಣ ಅದೃಷ್ಟವಶಾತ್ ಬಚಾವಾಗಿ ತಮ್ಮ ಮನೆಯವರ ಮುಖ ನೋಡುವಂತಾಗಿದೆ. ಅಪಘಾತದ ತೀವ್ರತೆಗೆ ವಾಹನಗಳು ಸಾಕಷ್ಟು ಜಖಂಗೊಂಡಿದ್ದು ಥಾರ್ ಜೀಪು ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
