ಬಜಪೆ ಪೊಲೀಸರು ಕಾರ್ಯಾಚರಣೆ ನಡೆಸಿ MDMA ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ . ದಿನಾಂಕ 02-11-2024 ರಂದು ಸಂಜೆ ಬಜಪೆ ಪೊಲಿಸ್ ಠಾಣೆಯ PSI ರೇವಣಸಿದ್ದಪ್ಪ ರವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ತೆಂಕಎಕ್ಕಾರು ಗ್ರಾಮದ, ಬಜಪೆಯಿಂದ ಕಟೀಲು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಮಾದಕವಸ್ತು MDMA(ಕ್ರೀಸ್ಟಲ್) ಮಾರಾಟ ಮಾಡುತ್ತಿದ್ದ ಮಂಗಳೂರು ತಾಲೂಕು ತೋಕೂರು ಜೋಕಟ್ಟೆ ನಿವಾಸಿ ಕೆ.ಹಚ್ ಅಬ್ದುಲ್ ಖಾದರ್ ರವರ ಮಗ ಉಮ್ಮರ್ ಫಾರೂಕ್ ಮತ್ತು ಮಂಗಳೂರು ತಾಲೂಕು ಬಜಪೆ ಜರಿನಗರದ ಮನ್ಸೂರ್ ಎಂಬವರ ಮಗ ಮೊಹಮ್ಮದ್ ಅಬ್ದುಲ್ ಜುನೈದ್ ಎಂಬವರನ್ನು ವಶಕ್ಕೆ ಪಡೆದು, ಅವರ ವಶದಲ್ಲಿದ್ದ ಸುಮಾರು 50,000 ರೂಪಾಯಿ ಮೌಲ್ಯದ 9.11 ಗ್ರಾಂ ತೂಕದ ಮಾದಕವಸ್ತು MDMA(ಕ್ರೀಸ್ಟಲ್), ಎರಡು ಮೊಬೈಲ್ ಪೋನ್ ಗಳು, KA 19 ET 6717 ನೇ ನಂಬ್ರದ ಬೈಕ್ ಹಾಗು ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಅವರ ವಿರುದ್ದ ಮಾದಕ ವಸ್ತು ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, DCP ಯವರಾದ ಸಿದ್ದಾರ್ಥ ಗೋಯೆಲ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ ಕೆ. ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ PSI ರೇವಣಸಿದ್ದಪ್ಪ, PSI ಕುಮಾರೇಶನ್, PSI ಲತಾ, ಸಿಬ್ಬಂದಿಯವರಾದ ರಶೀದ ಶೇಖ್, ಸುಜನ್, ದುರ್ಗಾ ಪ್ರಸಾದ, ಬಸವರಾಜ್ ಪಾಟೀಲ್, ಚಿದಾನಂದ, ಭರಮಾ ಬಡಿಗೇರ್, ಅನಿಲ್ ಕುಮಾರ್, ಪ್ರೇಮ್ ಕುಮಾರ್, ಪ್ರಕಾಶ್ ಗೌಡ, ವಿರೇಶ್ ಹಿರೇಮಠ, ಚಂದ್ರಕಾಂತ್, ಮದು, ವಿರುಪಾಕ್ಷ, ವಿಶ್ವನಾಥ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
