ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಮರವೇರಿದ ಕಾರು. ವಿಟ್ಲ ಸಮೀಪದ ಕಂಬಳೆಬೆಟ್ಟು ವಿನಲ್ಲಿ ಘಟನೆ

ಕರಾವಳಿ

ವಿಟ್ಲ-ಪುತ್ತೂರು ರಸ್ತೆಯ ಕಂಬಳೆಬೆಟ್ಟುನಲ್ಲಿ ಒಳರಸ್ತೆಯಿಂದ ಅಚಾನಕ್ ಆಗಿ ಬಂದ ಬೈಕ್ ಸವಾರನ ಪ್ರಾಣ ಉಳಿಸಲು ಕಾರು ಚಾಲಕ ಮುಂದಾಗಿದ್ದ. ಆ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಹತ್ತಿ ಪಲ್ಟಿಹೊಡೆದು ಸಿನಿಮೀಯ ಸ್ಟಂಟ್ ರೀತಿಯಲ್ಲಿ ಮರವೇರಲು ಮುಂದಾಗಿದೆ.

ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ್ ಗಾಯಗೊಂಡಿದ್ದಾರೆ. ಕಾರು ಜಖಂಗೊಂಡಿದ್ದರೂ ಚಾಲಕ ಬೊಳಂತಿಮುಗೇರು ನಿವಾಸಿ ಸನಾನ್ ಅಪಾಯದಿಂದ ಪಾರಾಗಿದ್ದಾರೆ.