ನಕ್ಸಲ್ ವಾದಿ ವಿಕ್ರಂಗೌಡರ ಎನ್ಕೌಂಟರ್ ನ್ಯಾಯಾಂಗ ತನಿಖೆಗೊಳಪಡಿಸಿ: ಸಿಪಿಐಎಂ.

ಕರಾವಳಿ

ನಿನ್ನೆ ದಿನ ನಡೆದ ಪೋಲಿಸ್ ದಾಳಿಯಲ್ಲಿ ನಕ್ಸಲ್ ವಾದಿ ವಿಕ್ರಂ ಗೌಡರ ಹತ್ಯೆಯಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ. ಗುಂಡಿನ ಚಕಮಕಿಯಲ್ಲಿ ಈ ಹತ್ಯೆಯಾಗಿದೆ ಎಂದು ವಿವರಿಸಲಾಗಿದೆ. ಆದರೆ 50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲವೆ ಎಂಬ ಪ್ರಶ್ನೆಯು, ಪೋಲೀಸ್ ಕ್ರಮವನ್ನು ಸಂಶಯಿಸಲಾಗುತ್ತಿದೆ. ಆದ್ದರಿಂದ ರಾಜ್ಯದ ಜನತೆ ನಿಜವನ್ನು ತಿಳಿಯುವಂತಾಗಲು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ. ಆ ಮೂಲಕ ರಾಜ್ಯದ ಜನತೆ ಸತ್ಯವೇನೆಂದು ತಿಳಿಯುವಂತಾಗಬೇಕೆಂದು ಕೋರಿದೆ.

ಸುತ್ತುವರೆದು ಬಂದಿಸಲು ಅವಕಾಶವಿರುವಾಗ ಎನ್ ಕೌಂಟರ್ ಹೆಸರಲ್ಲಿ ಹತ್ಯೆ ಮಾಡುವುದನ್ನು ಸಿಪಿಐಎಂ ಒಪ್ಪುವುದಿಲ್ಲ ಮತ್ತು ಅಂತಹ ದುಷ್ಕೃತ್ಯವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ.

ಮುಖ್ಯ ವಾಹಿನಿಗೆ ಬನ್ನಿ ಸಿಪಿಐಎಂ ಕರೆ.

ವ್ಯಕ್ತಿಗತ ಹಿಂಸಾತ್ಮಕ ಹಾದಿಯು ಖಂಡಿತಾ ಸಮಾಜದಲ್ಲಿ ಯಾವ ಬದಲಾವಣೆಯನ್ನು ತರಲಾಗದು ಎಂಬುದು ಈಗಾಗಲೆ ಸಾಬೀತಾದ ವಿಚಾರವಾಗಿದೆ. ಆದ್ದರಿಂದ ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರು ಮುಖ್ಯವಾಹಿನಿಗೆ ಬಂದು ಜನ ಚಳುವಳಿಯಲ್ಲಿ ತೊಡಗಿ ಸಮಾಜದ ಬದಲಾವಣೆಗಾಗಿ ಅಥವಾ ಶೋಷಣೆಯ ವಿರುದ್ದ ಸಕ್ರಿಯರಾಗುವುದೊಂದೇ ಸರಿ ದಾರಿಯಾಗಿದೆ. ಅದೇ ರೀತಿ, ರಾಜ್ಯ ಸರಕಾರವೂ ಕೂಡಾ, ಇವರನ್ನು ಮುಖ್ಯವಾಹಿನಿಗೆ ತರುವ ಅಗತ್ಯ ನೈಜ ಕ್ರಮಗಳನ್ನು ವಹಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.