ವಿಟ್ಲ ಸಮೀಪದ ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ಮೌರಿಸ್ ಡಿಸೋಜಾ(61)ಮೃತ ವ್ಯಕ್ತಿ. ಪತ್ನಿ ಮತ್ತು ಮಕ್ಕಳು ಕೆಲ ವರ್ಷಗಳ ಹಿಂದೆ ಬಿಟ್ಟು ಹೋಗಿದ್ದು ಆ ಬಳಿಕ ಒಬ್ಬಂಟಿಯಾಗಿ ಮೌರಿಸ್ ಡಿಸೋಜಾ ವಾಸಿಸುತ್ತಿದ್ದರು.
ಕೃಷಿಕರಾಗಿರುವ ಮೌರಿಸ್ ಅವರ ಮನೆಗೆ ಇಂದು ಬೆಳಗ್ಗೆ ಕೂಲಿ ಕೆಲಸದವರು ಬಂದಾಗ ಮನೆಯೊಳಗೆ ಮಲಗಿದ ಸ್ಥಿತಿಯಲ್ಲಿ ಮಾಲಿಕನ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೊಂದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ.
