ಯುರೇಖಾ ಪೋರ್ಬ್ಸ್ ವ್ಯಾಪಾರ ಮಳಿಗೆಯ ವಾಟರ್ ಫಿಲ್ಟರ್ ದೋಷಪೂರಿತ; ಗ್ರಾಹಕ ಶಕೀಲ್ ಸೂರಲ್ಪಾಡಿಗೆ ಪೂರ್ತಿ ವೆಚ್ಚ ಪಾವತಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ

ಕರಾವಳಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಮಹತ್ವದ ಆದೇಶವೊಂದನ್ನು ನೀಡಿದ್ದು, ದೋಷಪೂರಿತ ವಾಟರ್ ಫಿಲ್ಟರ್ ಖರೀದಿಸಿದ ಗ್ರಾಹಕನಿಗೆ ಪೂರ್ತಿ ಹಣ ಹಿಂತಿರುಗಿಸುವಂತೆ ಆದೇಶಿಸಿದೆ.

ಮಂಗಳೂರು ತಾಲೂಕಿನ ಸೂರಲ್ಪಾಡಿ ನಿವಾಸಿ ಶಕೀಲ್ ಇವರು ಯುರೇಖಾ ಪೋರ್ಬ್ಸ್ ಇದರ ಮಂಗಳೂರಿನ ವ್ಯಾಪಾರ ಮಳಿಗೆಯಿಂದ 1,18,069 ರೂ. ನೀಡಿ ನೀರು ಶುದ್ದೀಕರಿಸುವ ಯಂತ್ರವನ್ನು ಖರೀದಿಸಿದ್ದರು. ಆದರೆ ಅವರು ಖರೀದಿಸಿದ ವಾಟರ್ ಫಿಲ್ಟರ್ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸದೆ ದೋಷಪೂರಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಹಲವಾರು ಬಾರಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿದರೂ ಸರಿಯಾದ ಪ್ರತಿಕ್ರಿಯೆ ನೀಡದ ಕಾರಣ, ದೂರು ಸಂಖ್ಯೆ: 235/2024 ರಂತೆ ಯುರೇಖಾ ಪೋಬ್ಸ್ ಕಂಪೆನಿ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಅವರ ಮನವಿಯನ್ನು ಪುರಸ್ಕರಿಸಿದ ಮಂಗಳೂರಿನ ಗ್ರಾಹಕ ವೇದಿಕೆಯು ಸದ್ರಿಯವರ ಕೊಂದು ಕೊರತೆಯನ್ನು ಮನಗಂಡು, ಯುರೇಖಾ ಸಂಸ್ಥೆಯ ವಾಟರ್ ಫಿಲ್ಟರ್ ನೀರು ಶುದ್ದಿಕರಿಸುವಲ್ಲಿ ವಿಫಲವಾಗಿದ್ದು, ಸದ್ರಿ ವ್ಯಾಪಾರ ಮಳಿಗೆಯು ವಾಲ್ಟರ್ ಪಿಲ್ಟರ್ ಬಾಬ್ತು ಖರೀದಿಯ ಮೊತ್ತ 1,18,069 ರೂ. ಹಾಗೂ 6% ಬಡ್ಡಿಯ ಜೊತೆಗೆ ಅಲ್ಲದೇ ಹತ್ತು ಸಾವಿರ ಪರಿಹಾರದೊಂದಿಗೆ ಮತ್ತು ವಿಳಂಬವಾದಲ್ಲಿ ಹೆಚ್ಚುವರಿ ಬಡ್ಡಿ ಶೇಕಡಾ 8 ರಂತೆ ಮತ್ತು ವ್ಯಾಜ್ಯದ ಬಾಬ್ತು ರೂಪಾಯಿ 5,000 ದೂರುದಾರರಿಗೆ ಪಾವತಿಸಬೇಕೆಂದು ಇತ್ತೀಚೆಗೆ ಆದೇಶಿಸಿದೆ.

ಸದ್ರಿ ವ್ಯಾಜ್ಯದಲ್ಲಿ ಗ್ರಾಹಕರು ಪ್ರಯೋಗಾಲಯದ ವರದಿಯನ್ನು ಹಾಜರುಪಡಿಸಿದ್ದು, ಅದರಂತೆ ಸದ್ರಿ ವಾಲ್ಟರ್ ಪಿಲ್ಟರ್ ನ ಜಲವು ಕ್ರಿಮಿಯುಕ್ತವಾಗಿರುವುದನ್ನು ಮನಗಂಡು ಮಾನ್ಯ ಗ್ರಾಹಕ ವೇದಿಕೆಯು ಈ ಮೇಲಿನಂತೆ ಆದೇಶಿಸಿರುತ್ತದೆ. ಸಂತ್ರಸ್ತ ಗ್ರಾಹಕರ ಪರವಾಗಿ ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ದೀನನಾಥ ಶೆಟ್ಟಿ ವಾದಿಸಿದ್ದರು.