ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಮೇಯನೇಸ್ ನಿಷೇಧಿಸಿ ಆದೇಶ

ರಾಷ್ಟ್ರೀಯ

ಮೇಯನೇಸ್ ಅನ್ನು ಸರಿಯಾಗಿ ತಯಾರಿಸದಿರುವುದು ಮತ್ತು ಸರಿಯಾಗಿ ಸಂಗ್ರಹಿಸದಿರುವುದು ಸೇರಿದಂತೆ ಹಲವು ಅಂಶಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಂಡಿವೆ. ತಮಿಳುನಾಡು ಸರ್ಕಾರವು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಪ್ರಕಾರ, ಮೊಟ್ಟೆಗಳಿಂದ ತಯಾರಿಸಿದ ಮೇಯನೇಸ್ ಅನ್ನು ಒಂದು ವರ್ಷ ನಿಷೇಧಿಸಿ ಆದೇಶಿಸಿದೆ. ಈ ಆದೇಶದ ಪ್ರಕಾರ, ಸಾರ್ವಜನಿಕರ ಹಿತದೃಷ್ಟಿಯಿಂದ, ತಮಿಳುನಾಡಿನ ಯಾವುದೇ ಭಾಗದಲ್ಲಿ ಮೇಯನೇಸ್ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಗೆಜೆಟ್‌ನಲ್ಲಿ ತಿಳಿಸಲಾಗಿದೆ.

ತಮಿಳುನಾಡು ಆಹಾರ ಸುರಕ್ಷತಾ ಇಲಾಖೆ ಪ್ರಕಟಿಸಿದ ತಮಿಳುನಾಡು ಗೆಜೆಟ್‌ನಲ್ಲಿ ಏಪ್ರಿಲ್ ಎಂಟರಿಂದ ಒಂದು ವರ್ಷದ ಅವಧಿಗೆ ನಿಷೇಧ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಶವರ್ಮ ಮತ್ತು ಚಿಕನ್ ತಂದೂರಿಯೊಂದಿಗೆ ಮೇಯನೇಸ್ ಅನ್ನು ಉಪಯೋಗಿಸಿತ್ತಿದ್ದರು. ಮಕ್ಕಳು, ಹದಿಹರೆಯದವರು ಮತ್ತು ವೃದ್ಧರು ಸಹ ಮೇಯನೇಸ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಅದಕ್ಕಾಗಿಯೇ, ಸಾರ್ವಜನಿಕರ ಹಿತದೃಷ್ಟಿಯಿಂದ, ತಮಿಳುನಾಡು ಸರ್ಕಾರವು ಈ ಮೇಯನೇಸ್ ಮೇಲೆ ಒಂದು ವರ್ಷದ ನಿಷೇಧ ಹೇರಿದೆ.