ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ‌ ನೌಷಾದ್ ಮೇಲೆ ಮಂಗಳೂರು ಜೈಲಿನಲ್ಲಿ ಹಲ್ಲೆ. ಅಪಾಯದಿಂದ ಪಾರು.

ಕರಾವಳಿ

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ‌ ನೌಷಾದ್ ಮೇಲೆ ಸೋಮವಾರ ಸಂಜೆ ಹಲ್ಲೆಗೆ ಯತ್ನ ನಡೆದಿದೆ. ನೌಷಾದ್ ಅಪಾಯದಿಂದ ಪಾರಾಗಿದ್ದಾನೆ. ಸೋಮವಾರದಂದು ನೌಷಾದ್ ನ ಪೊಲೀಸ್ ಕಸ್ಟಡಿ ಅಂತ್ಯವಾದ ಕಾರಣ ಪೊಲೀಸರು ಆತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ನೌಶಾದ್ ನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದ ಹಿನ್ನಲೆಯಲ್ಲಿ ಆತನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಉದ್ದೇಶಿಸಿದ್ದರು.

ಈ ಮದ್ಯೆ ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದು ನೌಷಾದ್ ಹೇಳಿದ್ದ ಎನ್ನಲಾಗಿದೆ. ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಆತನನ್ನು ನೋಡಿದ ಜೈಲಿನಲ್ಲಿದ್ದ ಇತರ ಕೈದಿಗಳು ಇದ್ದಕಿದ್ದಂತೆ ನೌಷಾದ್ ಮೇಲೆ ಕಲ್ಲು ಮತ್ತು ಸಿಕ್ಕ‌ ಸಿಕ್ಕ ವಸ್ತು ತೂರಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ನೌಷಾದ್ ನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಷಾದ್ ಹಾಗೂ ಇತರ ಇಬ್ಬರನ್ನು ಕಳೆದ ವಾರವಷ್ಟೇ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಗಿದ ಕಾರಣ ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.