ಹರೀಶ್ ಪೂಂಜಾ ಓರ್ವ ಹೆಬಿಚ್ಯುವಲ್ ಅಫೆಂಡರ್
ದ.ಕ ಜಿಲ್ಲೆಯ ಸೌಹಾರ್ದ ಜನತೆಯ ಪರವಾಗಿ ಉಚಿತವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಬಾಲನ್
✍️. ನವೀನ್ ಸೂರಿಂಜೆ, ಪತ್ರಕರ್ತರು
“ಕಂತ್ರಿ ಬ್ಯಾರಿಗಳು” ಎಂದಿದ್ದ ಶಾಸಕ ಹರೀಶ್ ಪೂಂಜಾ ವಿರುದ್ದ ದಾಖಲಾದ ಎಫ್ಐಆರ್ ರದ್ದತಿ ಕೋರಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಹಿರಿಯ ವಕೀಲ ಎಸ್ ಬಾಲನ್ ಅವರು ದೂರುದಾರ ಬಿ ಎಸ್ ಇಬ್ರಾಹಿಂ ಪರವಾಗಿ ವಕಾಲತ್ತು ಹಾಕಿ ವಾದ ಮಂಡಿಸಿದರು. ಅದಕ್ಕೂ ಮೊದಲು ನಾವು ಒಂದು ಸಣ್ಣ ಸಿದ್ದತಾ ಮೀಟಿಂಗ್ ನಡೆಸಿದ್ದೆವು. ಗೆಳತಿ, ವಕೀಲೆ ರಕ್ಷಿತಾ ಸಿಂಗ್ ಕೂಡಾ ಈ ಕಾನೂನು ಹೋರಾಟದಲ್ಲಿ ಜತೆಯಾದರು.
ಹರೀಶ್ ಪೂಂಜಾ ಅವರ ಎಲ್ಲಾ ದಾಖಲೆಗಳನ್ನು ಅಧ್ಯಯನ ನಡೆಸಿದ ಎಸ್ ಬಾಲನ್ ಅವರು ಹೈಕೋರ್ಟ್ ನಲ್ಲಿ ಹಲವು ಪ್ರಮುಖ ಸಂಗತಿ ಉಲ್ಲೇಖಿಸಿದರು.
- ಹರೀಶ್ ಪೂಂಜಾ ಒರ್ವ ಹೆಬಿಚ್ಯುವಲ್ ಅಫೆಂಡರ್.
- ಆತ ಒರ್ವ ಪುನರಾವರ್ತಿತ ಆರೋಪಿ. ಹರೀಶ್ ಪೂಂಜಾ ವಿರುದ್ದ ಇದಲ್ಲದೇ ಏಳು ಎಫ್ಐಆರ್ ದಾಖಲಾಗಿದೆ. ಏಳೂ ಎಫ್ಐಆರ್ ಗಳೂ ಪುನರಾವರ್ತಿತ ಆಪರಾಧವೇ ಆಗಿದೆ.
- ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ.
- ಶಾಸಕನಾಗಿ ಕಾರ್ಯಾಂಗದ 144 ಸೆಕ್ಷನ್ ಅನ್ನು ಉಲ್ಲಂಘಿಸುತ್ತಾರೆ.
- ನೂರು ಕೇಸ್ ಹಾಕಿದರೂ ಹೈಕೋರ್ಟ್ ಅನ್ನೂ ನಾನು ಕೇರ್ ಮಾಡಲ್ಲ ಎಂದವನು ಈಗ ರದ್ದತಿ ಕೇಳುತ್ತಿದ್ದಾರೆ.
- ಹರೀಶ್ ಪೂಂಜಾನಿಗೆ ನಾಗರಿಕರಿಗೆ ನೀಡುವ ಯಾವ ಕರುಣೆಯನ್ನೂ ನ್ಯಾಯಾಂಗ ನೀಡುವ ಅಗತ್ಯ ಇಲ್ಲ.
- ಹರೀಶ್ ಪೂಂಜಾ ಭಾಷಣ ಮಾಡಿದ ತೆಕ್ಕಾರು ದೇವಸ್ಥಾನದ ವೇದಿಕೆಯೇ ಮುಸ್ಲೀಮರ ಜಮೀನಲ್ಲಿ ನಿರ್ಮಾಣವಾಗಿತ್ತು. ತೆಕ್ಕಾರಿನಲ್ಲಿ ಹಿಂದೂ ಮುಸ್ಲೀಮರು ಬಹಳ ಅನೋನ್ಯತೆಯಿಂದ ಬದುಕುತ್ತಿದ್ದಾರೆ.
- ಸೌಹಾರ್ದತೆಯನ್ನು ರಕ್ಷಿಸುವ ಸಂವಿಧಾನಿಕ ಕರ್ತವ್ಯ ಹೊಂದಿರುವ ಶಾಸಕನೊಬ್ಬ ಅದನ್ನು ಹಾಳುಗೆಡವಲು ಯತ್ನಿಸುತ್ತಾನೆ. ಹಾಗಾಗಿ ಆರೋಪಿ ಪೂಂಜಾ ಶಾಸಕ ಸ್ಥಾನಕ್ಕೇ ಅನರ್ಹ ವ್ಯಕ್ತಿಯಾಗಿದ್ದಾನೆ.
ಪ್ರಕರಣ ಮೇ 22 ಕ್ಕೆ ಮುಂದೂಡಲ್ಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ ಜನತೆಯ ಪರವಾಗಿ ಎಸ್ ಬಾಲನ್ ಅವರು ಉಚಿತವಾಗಿ ವಾದ ಮಂಡಿಸಿದ್ದಾರೆ.
