ಪುತ್ತೂರು: ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸುದೀರ್ಘ ಕಾಲದ ಪ್ರೇಮ ವಿವಾದಾತ್ಮಕ ತಿರುವು ಪಡೆದಿದೆ. ಇದೀಗ ವಿದ್ಯಾರ್ಥಿ ನಿ ಗರ್ಭವತಿಯಾಗಿದ್ದು ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪುತ್ತೂರಿನ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರ ಮಗ ಎಂಜಿನಿಯರಿಂಗ್ ಓದುತ್ತಿದ್ದು, ಅನೇಕ ವರ್ಷಗಳಿಂದ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ.
ಇಬ್ಬರ ಪ್ರೀತಿ, ಪ್ರೇಮವು ಪ್ರಣಯಕ್ಕೆ ತಿರುಗಿದ ಪರಿಣಾಮ ವಿದ್ಯಾರ್ಥಿನಿ ಗರ್ಭಧರಿಸಿದ್ದಾಳೆ. ವಿಷಯ ತಿಳಿಯುತ್ತಲೇ ಹುಡುಗಿ ಕಡೆಯವರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ದೂರು ಸ್ವೀಕರಿಸಿದ ಪೊಲೀಸರು ವಿದ್ಯಾರ್ಥಿಯ ಹೆತ್ತವರನ್ನು ಕರೆದು ಮಾಹಿತಿ ಪಡೆದುಕೊಂಡಿದ್ದಾರೆ.

ಈ ವಿಚಾರವಾಗಿ ಎರಡು ಕುಟುಂಬಗಳ ಒಳಗೆ ಮಾತ್ರವಲ್ಲದೆ ಪುತ್ತೂರಿನ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಉಂಟುಮಾಡುತ್ತಿದೆ. ಕೆಲ ಪ್ರಮುಖರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯತಿ ನಡೆದಿದೆ. ಎರಡೂ ಮನೆಯವರ ನಡುವೆ ನಡೆದ ಮಾತುಕತೆಯಲ್ಲಿ ಹುಡುಗ, ಹುಡುಗಿ ಪರಸ್ಪರ ಮದುವೆಯಾಗಲು ಸಮ್ಮತಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣ ನಾನಾ ರೀತಿಯಲ್ಲಿ ವ್ಯರಲ್ ಆಗುತ್ತಿದ್ದು ,ಪುತ್ತೂರಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಾರಿ ಚರ್ಚೆಯ ವಸ್ತುವಾಗಿದೆ. ಕೆಲವು ಸಮಯದ ಹಿಂದೆ ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ರಾಸಲೀಲೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಪ್ರಕರಣವು ದಾಖಲಾಗಿತ್ತು. ಪುತ್ತೂರಿನ ಕಾಲೇಜುಗಳಲ್ಲಿ ಇದೀಗ ಕೊಮನ್ ಆಗಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
