ಸಿ.ಎ ನೌಫಲ್ & ಕಂಪೆನಿ ಮತ್ತು ಯೂತ್ ಮೂವ್ ಮೆಂಟ್ ಆಫ್ ಇಂಡಿಯಾ ಜಂಟಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆದಿತ್ಯವಾರ ನಡೆಯುವ ವಾಲ್ಕಥಾನ್ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿವೃತ್ತ DCP ಜಿ.ಎ ಬಾವಾ ಕರೆ ನೀಡಿದರು. ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಕೋಮು ಸಾಮರಸ್ಯ ಮೂಡಿಸುವುದು ಮತ್ತು ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವ ಸಮೂಹವು ಭಾಗವಹಿಸಬೇಕು ಎಂದು ಹೇಳಿದ ಬಾವಾ, ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ವಿದ್ಯಾರ್ಥಿಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ವಾಲ್ಕಥಾನ್ ಮೂಲಕ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯವು ಬೆಂಗಳೂರಿನ ಟೌನ್ ಹಾಲ್ ನಿಂದ ಜೂನ್ 22 ರ ಬೆಳಿಗ್ಗೆ 7 ಗಂಟೆಗೆ ಕಾಲ್ನಡಿಗೆ ಜಾಥಾ ಮಾಡುತ್ತಾ ಫ್ರೀಡಂ ಪಾರ್ಕ್ ವರೆಗೆ ಸಾಗಲಿದ್ದಾರೆ. ಕಾರ್ಯಕ್ರಮವನ್ನು ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಯಂಗ್ ಬ್ರಿಗೇಡ್ ನ ಜುನೈದ್ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಯುವ ಸಮುದಾಯದಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮಾಡಿಸುವ ವಿಭಿನ್ನ ಕಾರ್ಯಕ್ರಮ ನಾವು ಹಮ್ಮಿ ಕೊಳ್ಳಲಿದ್ದೇವೆ. ವಿಶೇಷವಾಗಿ ಈಗಿನ ಸ್ಥಿತಿಯಲ್ಲಿ ಹಲವು ಯುವಕರು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಿರುವುದು ಹೆಚ್ಚುತ್ತಿದೆ. ಹಾಗಾಗಿ, ನಾವು ಕೌನ್ಸಿಲಿಂಗ್ ಕೇಂದ್ರವನ್ನು ತೆರೆಯಲು ಉದ್ದೇಶ ಮಾಡಿದ್ದೇವೆ. ಮಾನಸಿಕ ಮತ್ತು ಶಾರೀರಿಕ ಉನ್ನತಿ ಈಗ ಆರ್ಥಿಕ ಉನ್ನತಗಿಂತ ಪ್ರಾಮುಖ್ಯ ಪಡೆದಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ನಾವು ಅಧ್ಯಯನ ಮಾಡಿ ಪರಿಹಾರ ಕ್ರಮಗಳನ್ನು ಮಾಡಲು ಉದ್ದೇಶ ಮಾಡಿದ್ದೇವೆ ಎಂದು ಖ್ಯಾತ ಸಿ. ಎ. ನೌಫಲ್ ಹೇಳಿದರು. ವಾಲ್ಕಥಾನ್ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲು ಅವರು ಆಹ್ವಾನ ನೀಡಿದರು.
To confirm your participation, please complete the registration form below:
https://forms.gle/LLPN2M4MyRQvsgai9
