ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶಕ್ಕೆ ಬಂದು ಸೇವೆ ನೀಡುವ ಅಪರೂಪದ ಡಾಕ್ಟರ್

ಕರಾವಳಿ

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಡಾ. ನಾಸಿರ್ ಹುಸೇನ್ ಕಿಲ್ಪಾಡಿರವರು ಅಡ್ಡೂರಿನ ರಿಫಾ ಕ್ಲಿನಿಕ್ ನಲ್ಲಿ ಬಂದು ಸೇವೆ

ವೈದ್ಯ ವೃತ್ತಿ ಅನ್ನುವುದು ಪವಿತ್ರ ವೃತ್ತಿ. ಅದೊಂದು ಜೀವ ಉಳಿಸುವ ವೃತ್ತಿ. ಈ ಸಮಾಜದಲ್ಲಿ ವೈದ್ಯರಿಗೆ ಗೌರವದ ಸ್ಥಾನಮಾನಗಳಿವೆ. ಆದರೆ ಕೆಲವರು ನಗರ ಕೇಂದ್ರಿಕೃತಕ್ಕೆ ಸೀಮಿತವಾಗಿ ಕೆಲಸ ಮಾಡುವವರೇ ಜಾಸ್ತಿ. ಗ್ರಾಮೀಣ ಪ್ರದೇಶಕ್ಕೆ ಬಂದು ಸೇವೆ ನೀಡುವುದು ಬಹಳ ಅಪರೂಪ. ಗ್ರಾಮೀಣ ಪ್ರದೇಶದಿಂದಲೂ ಕಲಿತ ವೈದ್ಯರು ನಗರ ಪ್ರದೇಶದಲ್ಲೆ ತಮ್ಮ ಕಾರ್ಯಸಾಧನೆ ಮಾಡುತ್ತಾರೆ. ತಾನು ಹುಟ್ಟಿ ಬೆಳೆದ ಗ್ರಾಮೀಣ ಪ್ರದೇಶವನ್ನೇ ಮರೆತು ಬಿಡುತ್ತಾರೆ. ಅಂತಹದ್ದರಲ್ಲಿ ನಗರ ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ಬಂದು ಸಮಾಜ ಮುಖಿ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು, ರೋಗಿಗಳಿಗೆ ದೈರ್ಯ ತುಂಬಿ ಅವರ ಆತ್ಮ ಬಲವನ್ನು ಹೆಚ್ಚಿಸಿ, ರೋಗದ ಬಗ್ಗೆ ಮನವರಿಕೆ ಮಾಡಿ, ಆತ್ಮಬಲ ತುಂಬುವ ಅಪರೂಪದ ವೈದ್ಯರಾಗಿದ್ದಾರೆ ಡಾ. ನಾಸಿರ್ ಹುಸೇನ್ ಕಿಲ್ಪಾಡಿ.

ಸುಮಾರು ಹತ್ತು ವರ್ಷಗಳ ಕಾಲ ಕೇರಳ ಮಿಷನರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯನ್ನು ನೀಡಿ ಜನಾನುರಾಗಿ ವೈದ್ಯರಾಗಿ ಗುರುತಿಸಿ ಕೊಂಡಿದ್ದ ನಾಸಿರ್ ಹುಸೇನ್ ಕಿಲ್ಪಾಡಿ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಹತ್ತು ವರ್ಷಗಳ ತನಕ ಕರ್ತವ್ಯ ನಿರ್ವಹಿಸಿದ್ದರು‌. ಗ್ರಾಮಾಂತರ ಪ್ರದೇಶವಾದ ಅಡ್ಡೂರು ಆಸುಪಾಸಿನ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸುಮಾರು ಇಪ್ಪತ್ತು ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ ವೃತ್ತಿಯಿಂದ ನಿವೃತ್ತರಾಗಿ ಇದೀಗ ವಿಶ್ರಾಂತಿ ಜೀವನದಲ್ಲಿದ್ದಾರೆ.

ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ವೈಫಲ್ಯಕ್ಕೆ ಅವಕಾಶವನ್ನು ನೀಡದೆ ತನ್ನ ವೃತ್ತಿಯಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಜನರ ಜೊತೆ ಬೆರೆತು ರೋಗಿಗಳ ಸಮಸ್ಯೆಗಳನ್ನು ಅರಿತು, ಸಮಾಲೋಚನೆ ನಡೆಸಿ ಧೈರ್ಯ ತುಂಬಿ, ಆರೋಗ್ಯದ ಜೊತೆ ಮಾನವೀಯ ಮೌಲ್ಯಗಳಿಗೆ ವಿಶೇಷ ಪರಿಗಣನೆ ನೀಡುವ ವ್ಯಕ್ತಿತ್ವವನ್ನು ಮೈಗೂಡಿಸಿ ಕೊಂಡಿರುವ ಡಾ. ನಾಸಿರ್ ಹುಸೇನ್ ಕಿಲ್ಪಾಡಿಯವರ
ವ್ಯಕ್ತಿತ್ವ ಹಾಗೂ ನಡುವಳಿಕೆ ವೈದ್ಯಕೀಯ ಲೋಕಕ್ಕೆ ಮಾದರಿ ಯೋಗ್ಯವಾಗಿದೆ‌. ನಗರ ಭಾಗದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ನೀಡುವ ಡಾಕ್ಟರ್ ರಾಗಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲವಾಗಿದ್ದರೂ ಗ್ರಾಮೀಣ ಭಾಗದ ಜನರಿಗೆ ಉಪಕಾರವಾಗಲಿ ಎಂಬ ನಿಟ್ಟಿನಲ್ಲಿ ನಿರಂತರವಾಗಿ ಭೇಟಿ ನೀಡುತ್ತಿದ್ದರು ಇವರ ಸೇವೆಯೂ ನಿಜಕ್ಕೂ ಮಾದರಿ ಪ್ರಶಂಸನೀಯ.ಇತ್ತೀಚೆಗೆ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಇದರ ವತಿಯಿಂದ ಡಾ. ನಾಸಿರ್ ಹುಸೆನ್ ಕಿಲ್ಪಾಡಿಯವರಿಗೆ “ಜೀವಮಾನದ ಸಾಧನೆ” ಪ್ರಶಸ್ತಿ ನೀಡಿ ಗೌರವಿಸಲಾಯಿತು.