ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ವಸತಿಗೃಹದಲ್ಲಿ ಮಾರ್ಚ್ 1, 2014 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯಾದ ಚಿಕ್ಕಮಗಳೂರು ನಿವಾಸಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ಆದೇಶ ನೀಡಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರಾದ ಲಿಂಗಪ್ಪ ಪೂಜಾರಿ ರವರು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷರೊಪಾಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸದ್ರಿ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಅಳವಡಿಸಲಾದ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿ, ತನಿಖೆ ನಡೆಸಿದ ಆಗಿನ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅದೀಕ್ಷಕರಾಗಿದ್ದ ರಾಹುಲ್ ಕುಮಾರ್ ಶಹಪುರ್ ಐ.ಪಿ.ಎಸ್ ರವರು ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯ ಮಂಗಳೂರಿಗೆ ಸಲ್ಲಿಸಿದ್ದರು.
ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ರವರು ದಿನಾಂಕ: 28.08.2025 ರಂದು ಆರೋಪಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನಿಗೆ
IPC ಸೆಕ್ಷನ್ 302 ರಡಿಯಲ್ಲಿ – ಜೀವಾವಧಿ ಶಿಕ್ಷೆ + ರೂ.15,000/- ದಂಡ (ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು).
IPC ಸೆಕ್ಷನ್ 201 ರಡಿಯಲ್ಲಿ– 2 ವರ್ಷಗಳ ಸರಳ ಜೈಲು + ರೂ.5,000/- ದಂಡ (ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲು) ವಿಧಿಸಿ ಅದೇಶಿಸಿರುತ್ತದೆ.
ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ಪಿ ನಾಯಕ್ ರವರು ವಾದ ಮಂಡಿಸಿರುತಾರೆ. ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ಎ.ಎಸ್.ಐ ಕಲೈಮಾರ್ ರವರು ಹಾಗೂ ನ್ಯಾಯಾಲಯ ಸಿಬ್ಬಂದಿಯಾಗಿ ಮಲ್ಲಿಕಾರ್ಜುನ್ ರವರು ಕರ್ತವ್ಯ ನಿರ್ವಹಿಸಿರುತ್ತಾರೆ.
