ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 33//9 ರಲ್ಲಿ 0.08.50 ಎಕ್ರೆ ಜಮೀನಿಗೆ ಎನ್ ಅಬೂಬಕ್ಕರ್ ಎಂಬವರು ಮಾಲಿಕನಾಗಿದ್ದು. ಅವರು ಸದ್ರಿ ಜಮೀನಿಗೆ ಸಂಬಂಧಿಸಿ ದಿನಾಂಕ 31.12.2024 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿರುವ ಆರ್ಟಿಸಿ ಕೇಂದ್ರದಿಂದ ಅವರ ಹಕ್ಕಿನ ಜಮೀನಿನ ಬಾಬ್ತು ಪಹಣಿ ಪತ್ರವನ್ನು ತೆಗೆದು ನೋಡಿದಾಗ, ಸದ್ರಿ ಪಹಣಿ ಪತ್ರದ ಕಾಲಂ 11ರ ಋಣಗಳು ಕಾಲಂನಲ್ಲಿ ಎಂಆರ್ಟಿ 4/2024-2025 Spl. Case NO. ನಂಬ್ರ 34/2025(Crime No. 30/2021 of and N Crime PS) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ಇವರಿಗೆ ರೂ. 2,00,000/- ಕ್ಕೆ ಮುಟ್ಟುಗೋಲು ಎಂಬುದಾಗಿ ದಾಖಲಾಗಿರುತ್ತದೆ.
ಈ ಬಗ್ಗೆ ಅಬೂಬಕ್ಕರ್ ಎಂಬವರು ಮ್ಯೂಟೇಷನ್ ರಿಜಿಸ್ಟ್ರಾರ್ ಪ್ರತಿಯನ್ನು ಸಹ ಪಡಕೊಂಡಿದ್ದು ಅದರಲ್ಲೂ ಸಹ ಇದೇ ರೀತಿ ದಾಖಲು ಇರುತ್ತದೆ. ಆ ಬಳಿಕ ಅವರು ಸೈಬರ್ನ ಇ-ಕೋರ್ಟ್ ಸೇವೆಗಳ ವಿಭಾಗದಲ್ಲಿ ಸದ್ರಿ ಕೇಸ್ನ ಬಗ್ಗೆ ವಿವರವನ್ನು ನೋಡಿದಾಗ ಮೇಲ್ಕಾಣಿಸಿದ ಕೇಸಿನ 5ನೇ ಆರೋಪಿ ಸಯ್ಯದ್ ಮೊಹಮ್ಮದ್ ಯಾನೆ ಸಯ್ಯದ್ ಮೊಹಮ್ಮದ್ ನಾಸಿಮ್ ಎಂಬವರ ಪರವಾಗಿ ವಕೀಲರು 2 ಜನ ಜಾಮೀನುದಾರರನ್ನು ಹಾಜರುಪಡಿಸಿದ್ದು, ಆ ಪೈಕಿ ಒಬ್ಬ ಜಾಮೀನುದಾರರಾದ ಅಬೂಕ್ಕರ್ ಹಾಜರುಪಡಿಸಿದ ಆರ್ಟಿಸಿ ಯು ಫಿರ್ಯಾದಿದಾರರ ಬಾಬ್ತು ಹಕ್ಕಿನ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 32/*/9 ರಲ್ಲಿ 0.08.50 ಎಕ್ರೆ ಜಮೀನಿನ ಆರ್ಟಿಸಿಯಾಗಿರುತ್ತದೆ.
ಈ ಬಗ್ಗೆ ನ್ಯಾಯಾಲಯದ ತಾರೀಕು. 14.06.2024 ರ ಆದೇಶದ ಪ್ರತಿಯ ಹಾಳೆಯಲ್ಲಿ ಫಿರ್ಯಾದಿದಾರರ ಹಕ್ಕಿನ ಜಮೀನನ್ನು ಆಧಾರವಾಗಿಸಿದ ವ್ಯಕ್ತಿಯ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ, ಫಿರ್ಯಾದಿದಾರರ ವಯಸ್ಸು, ವಿಳಾಸ ಮತ್ತು ಆಧಾರ್ ನಂಬ್ರಕ್ಕೂ ತಾಳೆ ಬರುವುದು ಕಂಡು ಬರುವುದಿಲ್ಲ. ಆರೋಪಿ ಅಬೂಬಕ್ಕರ್ ಎಂಬಾತನು ಫಿರ್ಯಾದಿದಾರರ ಹೆಸರಿನಲ್ಲಿರುವ ಆರ್ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿಯೆಂದು ಹೇಳಿ ನಂಬಿಸಿ, ನಟಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದ.ಕ ಜಿಲ್ಲೆ ಮಂಗಳೂರು ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿರುತ್ತಾರೆ. ಆದುದರಿಂದ ಆರೋಪಿ ಅಬೂಬಕ್ಕರ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 84/2025 ಕಲಂ: 417, 419 IPC ಯಂತೆ ಪ್ರಕರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ
