ಗಂಜಿಮಠ: ಪೆರಾರ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷನಿಗೆ 5.48 ಲಕ್ಷ ರೂ. ದಂಡ; ದಂಡ ತೆರಳು ತಪ್ಪಿದ್ದಲ್ಲಿ 3 ತಿಂಗಳ ಜೈಲುವಾಸ

ಕರಾವಳಿ

ಚೆಕ್ ಬೌನ್ಸ್ ಪ್ರಕರಣದಲ್ಲಿ ಗಂಜಿಮಠದ ಪೆರಾರ್ ವಿವಿಧೋದ್ದೇಶ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಅಗಸ್ಟಿನ್ ರಾಡ್ರಿಗಸ್ ಗೆ ಮಂಗಳೂರು ಜೆಎಂಎಫ್ ಸಿ 9ನೇ ನ್ಯಾಯಾಲಯ 5.48 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಅಗಸ್ಟಿನ್ ಸೊಸೈಟಿಗೆ ಅಧ್ಯಕ್ಷನಾಗಿದ್ದ ಅವಧಿಯಲ್ಲಿ 6 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಸಾಲದ ಮರುಪಾವತಿಗಾಗಿ ನೀಡಿರುವ 5,38,700 ರೂಪಾಯಿ ಮೊತ್ತದ ಚೆಕ್ ಅಮಾನ್ಯವಾಗಿದೆ. ಈ ಬಗ್ಗೆ ಆತನ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. 2021 ರಿಂದ 2025 ರವರೆಗೆ ವಿಚಾರಣೆ ನಡೆದು, ಪ್ರಕರಣದಲ್ಲಿ ಸೊಸೈಟಿ ಪರ ತೀರ್ಪು ಬಂದಿದೆ.

ಪ್ರಕರಣದಲ್ಲಿ ಆರೋಪಿಗೆ 5,48,700 ರೂಪಾಯಿ ದಂಡ ವಿಧಿಸಲಾಗಿದ್ದು, ಇದರಲ್ಲಿ 5,45,700 ರೂಪಾಯಿ ಸೊಸೈಟಿಗೆ ಹಾಗೂ 3000 ರೂಪಾಯಿ ಸರಕಾರಕ್ಕೆ ದಂಡ ಪಾವತಿಸಬೇಕು. ದಂಡ ತೆರಳು ತಪ್ಪಿದ್ದಲ್ಲಿ 3 ತಿಂಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ಫವಾಝ್ ಪಿಎ ಆದೇಶದಲ್ಲಿ ತಿಳಿಸಿದ್ದಾರೆ. ಸೊಸೈಟಿ ಪರವಾಗಿ ವಕೀಲರಾದ ಎಚ್ ವಿ ರಾಘವೇಂದ್ರ ಅವರು ವಾದ ಮಂಡಿಸಿದ್ದರು.