ದಿನಾಂಕ 10-10-2025ರ ಶುಕ್ರವಾರ ಸಂಜೆ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ, ದಲಿತ ಸಂಘದ ರಾಜ್ಯ ಸಂಚಾಲಕರಾದ ಎಂ.ದೇವದಾಸ್ ರವರ ಅದ್ಯಕ್ಷತೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು.
ಸರ್ವಾನುಮತದಿಂದ ಅಧ್ಯಕ್ಷರಾಗಿ ಸಿರಾಜ್ ಬಜ್ಪೆ ರವರನ್ನು ಆಯ್ಕೆಮಾಡಲಾಯಿತು.

ಗೌರವ ಅದ್ಯಕ್ಷರುಗಳಾಗಿ ಎಂ. ದೇವದಾಸ್, ರಾಬರ್ಟ್ ರೇಗೊ, ಅಬ್ದುಲ್ ಖಾದರ್ MJM, ವಸಂತ್, ಮೊನಕ, ಉಪಾಧ್ಯಕ್ಷರುಗಳಾಗಿ ದೀಪಕ್ ಪೂಜಾರಿ, ಇಂಜಿನಿಯರ್ ಇಸ್ಮಾಯಿಲ್ ಮತ್ತು ಥೋಮಸ್. ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಗೋಪಾಲ ಸುವರ್ಣ, ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ, ಜೊತೆ ಕಾರ್ಯದರ್ಶಿ ಆಯಿಷಾ, ಕೋಶಾಧಿಕಾರಿಯಾಗಿ ಮಾಲತಿ, ಕಾನೂನು ಸಲೆಹೆಗಾರರಾಗಿ ವಕೀಲರಾದ ವಿನೋದರ ಪೂಜಾರಿ ಮತ್ತು ನಿವೃತ PDO ಮಾಧವ ಅಮೀನ್ ಅವರುಗಳನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು, ಉಳಿದವರನ್ನು ಸದಸ್ಯರಾಗಿ ನೇಮಕ ಮಾಡಲಾಯಿತು.
ಬಜ್ಪೆಯ ಸರ್ವತೋಮ ಅಭಿವೃಧಿಯ ಬಗ್ಗೆ ಚಿಂತನೆ, ನ್ಯಾಯಪರ ಧ್ವನಿ, ಅನ್ಯಾಯದ ವಿರುದ್ಧ ಹೋರಾಟ, ಸಾಮಾಜಿಕ ನ್ಯಾಯ, ಧ್ವನಿ ಇಲ್ಲದವರ ಪರವಾಗಿ ಧ್ವನಿಗೂಡಿಸುವುದು ಮತ್ತು “ನಮ್ಮ ಧರ್ಮ ನಮ್ಮೊಂದಿಗೆ – ನಮ್ಮ ಸ್ನೇಹ ಎಲ್ಲರೊಂದಿಗೆ,” ಎಂಬ ದ್ಯೇಯ ವಾಕ್ಯದೊಂದಿಗೆ ನಮ್ಮ ಹೋರಾಟ ನಿರಂತರ ನಡೆಸಬೇಕು ಎಂಬುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ವಿಜಯ ಸುವರ್ಣ ಸ್ವಾಗತ ಕೋರಿ, ಕೊನೆಯಲ್ಲಿ ಆಯಿಷಾ ವಂದಿಸಿದರು.
