ಹಲ್ಲೆ, ಜೀವ ಬೆದರಿಕೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಕರಾವಳಿ

ಬಂಟ್ವಾಳ: ಕನ್ಯಾನ ನಿವಾಸಿ ಆನಂದ ಎಂಬವರಿಗೆ 2020 ರಲ್ಲಿ, ಆರೋಪಿಗಳಾದ ಅಜೀಝ್, ತೋಯಿಬ್, ಆಶೀಪ್, ಕಲೀಲ್, ಅಜೀಝ್ ಹಾಗೂ ಇತರರು ಕೂಟ ಸೇರಿ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 135/2020 ರಂತೆ ಪ್ರಕರಣ ದಾಖಲಾಗಿರುತ್ತು.

ಪ್ರಕರಣದ ಆರೋಪಿಗಳ ಪೈಕಿ ಬಂಟ್ವಾಳ, ಕನ್ಯಾನ ನಿವಾಸಿ ಮೊಯಿದ್ದೀನ ಶಾಕೀರ್ ಯಾನೆ ಮೊಯಿದ ಶಾಕೀರ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶಕ್ಕೆ ತೆರಳಿದ್ದ. ಸದ್ರಿ ಆರೋಪಿ ಮೇಲೆ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಜಾರಿಮಾಡಿತ್ತು.

ದಿನಾಂಕ:13-11-2025 ರಂದು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಮೊಯಿದ್ದೀನ ಶಾಕೀರ್ ಯಾನೆ ಮೊಯಿದ ಶಾಕೀರ ಎಂಬಾತನನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ, ದಿನಾಂಕ 14.11.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ಸೂಕ್ತ ಜಾಮೀನಿನೊಂದಿಗೆ ಬಿಡುಗಡೆಗೊಳಿಸಿರುತ್ತದೆ.