ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾಕ್ಟರ್ ಜೆಸಿಂತಾ ಡಿಸೋಜ ಮಾನವೀಯ ಕಳಕಳಿಯುಳ್ಳ ವೈದ್ಯರಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ರೋಗಿಗಳ ಆರೈಕೆ, ಶುಶ್ರೂಷೆ ವಿಚಾರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾದವರು. ಇವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು. 1991 ರಲ್ಲಿ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆಗೆ ಪಾದಾರ್ಪಣೆ ಮಾಡಿದ ಡಾ. ಜೆಸಿಂತಾ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಕವಾಗಿ ಸೇವೆಗೈದರು. ಆನಂತರ ಪುತ್ತೂರು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ, ತದನಂತರ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ, ವಿವಿದ ಹುದ್ದೆಯನ್ನು ನಿರ್ವಹಿಸಿದರು.ಸರಿ-ಸುಮಾರು 9 ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜೆಸಿಂತರವರು ತಾವು ಕಾರ್ಯನಿರ್ವಹಿಸಿದ ಎಲ್ಲಾ ಕಡೆ ಸಾರ್ವಜನಿಕರಿಂದ ಮುಕ್ತ ಪ್ರಶಂಸೆ ಪಡೆದುಕೊಂಡ ಹಿರಿಮೆ ಅವರದ್ದು.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆ ಹಿಂದಿನಂತ್ತಿಲ್ಲ. ರಾಜ್ಯದಲ್ಲಿಯೇ ವೆನ್ಲಾಕ್ ಆಸ್ಪತ್ರೆಗೆ ಹೆಸರಿದೆ.ಲಂಚ ಮುಕ್ತ ಆಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದರ ಹಿಂದೆ ವೈದ್ಯರ, ಹೋರಾಟಗಾರರ, NGO ಗಳ ಪಾತ್ರವು ಬಹಳ ಇದೆ. ವೆನ್ಲಾಕ್ ಆಸ್ಪತ್ರೆಗೆ ಇನ್ನಷ್ಟು ಹಿರಿಮೆ ಲಭಿಸುವಂತಾಗಲಿ. ಡಾ. ಜೆಸಿಂತಾ ಹಿರಿಯ ಅರಿವಳಿಕೆ ತಜ್ಞರಾಗಿಯೂ, ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞರಾಗಿಯೂ ಹೆಸರು ಪಡೆದುಕೊಂಡಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ನಿರಂತರ ಸೇವೆಗೈದು, ಹಂತಹಂತವಾಗಿ ಭಡ್ತಿ ಪಡೆದುಕೊಂಡ ಡಾ. ಜೆಸಿಂತಾ ಪ್ರಸ್ತುತ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ (DHO) ಹಾಗೂ ಶಸ್ತ್ರ ಚಿಕಿತ್ಸಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಜೆಸಿಂತಾ ನಿಸ್ವಾರ್ಥ ಸೇವೆಯ ಬಗ್ಗೆ ಸಾರ್ವಜನಿಕರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾ.ಜೆಸಿಂತ ಡಿಸೋಜರವರನ್ನು ಮಾನವ ಹಕ್ಕುಗಳ ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ಹಾಗೂ ವಕೀಲರಾದ ಮಹಮ್ಮದ್ ಹನೀಫ್ ಉಚ್ಚಿಲ್ ರವರ ನೇತ್ರತ್ವದ ನಿಯೋಗ ಅವರ ಕಛೇರಿಯಲ್ಲಿ ಭೇಟಿ ಮಾಡಿ ಪ್ರಸ್ತುತ ಆರೋಗ್ಯ ಸಮಸ್ಯೆ ಬಗ್ಗೆ ಚರ್ಚಿಸಿ, ಹಲವು ಸಲಹೆ ಸೂಚನೆಗಳನ್ನು ನೀಡಿದರು.
ದ.ಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು, ಹಾಲಿ ಕಾರ್ಯಾರಂಭಗೊಳ್ಳಲಿರುವ ಹೊಸ ಸಂಕೀರ್ಣ ಕಟ್ಟಡದ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು,ಹೊಸ ಸಂಕೀರ್ಣದಲ್ಲಿ ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗುವಂತೆ ಮಿತದರದಲ್ಲಿ ವಿಶೇಷ ಕೊಠಡಿ ವ್ಯವಸ್ಥೆ ಸೃಷ್ಟಿಸುವ ಸಾಧ್ಯತೆ ಬಗ್ಗೆ ಸಲಹೆ ಸೂಚನೆ ನೀಡಿ, ಸಲಹಾ ಸಮಿತಿಯಲ್ಲಿ ಸರ್ಕಾರೇತರ ಸಂಸ್ಥೆಯ ಪಾಲ್ಗೊಳ್ಳುವಿಕೆ ಮತ್ತು ಸರಕಾರೇತರ ಸಂಸ್ಥೆಯಿಂದ ನೆರವು ಪಡೆಯುವ ಬಗ್ಗೆ ಚರ್ಚಿಸಿ NGO ಗಳಿಂದ ರೋಗಿಗಳಿಗೆ ಸಹಾಯ, ಸಹಕಾರ ಒದಗಿಸುವ ಭರವಸೆಯನ್ನು ನೀಡಿ,ಡಾ. ಜೆಸಿಂತ ಡಿಸೋಜರವರಿಗೆ ಶುಭ ಹಾರೈಸಿದರು.