ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ರಸ್ತೆಯ ಲಾಡ್ಜ್ ನಲ್ಲಿ ರೂಂ ಮಾಡಿ ಕುಳಿತು ನಿಷೇದಿತ ಮಾದಕ ದ್ರವ್ಯ MDMA ಮತ್ತು ಹೈಡ್ರೋ ವೀಡ್ ಗಾಂಜಾ ವನ್ನು ಮಂಗಳೂರು ನಗರದ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿರುತ್ತಾರೆ.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ಪಾರ್ಕ್ ಮೈದಾನ ಬಂದರ್ ಬಳಿಯಲ್ಲಿ ನಿಷೇದಿತ ಮಾದಕ ವಸ್ತುವಾದ ಹೈಡ್ರೋ ವೀಡ್ ಗಾಂಜಾ ಮತ್ತು ಗಾಂಜಾವನ್ನು ಮಂಗಳೂರು ನಗರದ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ಮಾದಕ ವಸ್ತು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮುಂಬೈ ನಿವಾಸಿಯಾದ ಸಂದೀಪ್ ಶೆಟ್ಟಿ ದುಬೈನಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ವೀಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಾಟ ಮಾಡುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಸಾಗಾಟ ಮಾಡಲು ಎಡಲ್ ರೋಚ್ ರವರನ್ನು ನೇಮಕ ಮಾಡಿಕೊಂಡಿದನು. ಎಡಲ್ ರೋಚ್ ಎಂಬಾತನು ವಿಮಾನ ನಿಲ್ದಾಣದಿಂದ ಹೈಡ್ರೋ ವೀಡ್ ಗಾಂಜಾವನ್ನು ಸಂದೀಪ್ ಶೆಟ್ಟಿ ಹೇಳಿದ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ ಮಾಡುತ್ತಿದ್ದನು. ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಸ್ರಾದೋ ಮಕ್ಸೂದ್ ಸಾಗ್ ಮೂಖಾಂತರ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ರವರಿಗೆ ಬೆಂಗಳೂರಿನಲ್ಲಿ ಮಾದಕ ವಸ್ತುವನ್ನು ಪೂರೈಸಿರುತ್ತಾರೆ. ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವಿಡ್ ಮತ್ತು ಎಂಡಿಎಂಎ ನ್ನು ಎಂ.ಜಿ ಹೆಕ್ಟರ್ ವಾಹನದಲ್ಲಿ ತೆಗೆದುಕೊಂಡು ಬಂದಿರುವುದಾಗಿದೆ.
ಆರೋಪಿತರಾದ ಮೊಹಮ್ಮದ್ ಸಯ್ಯದ್ ಆಫ್ರೀದಿ, ಮಕ್ಸೂದ್ ಸಾಗ್ ಅಹಮ್ಮದ್ ಅಲಿ ಅರ್ಷಾನ್, ಫೆಲಿಕ್ಸ್.ಪಿ.ಜೊಸೆಫ್ ರವರನ್ನು ಮಂಗಳೂರು ನಗರದ ಲಾಡ್ಜ್ ನ ರೂಂ ನಲ್ಲಿ ಮಾದಕ ವಸ್ತುವನ್ನು ಯುವಕ, ಯುವತಿಯರಿಗೆ ಮಾರಾಟ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಲಾಗಿರುತ್ತದೆ. ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಸ್ರಾದೋ ಎಂಬವರನ್ನು ಗ್ರೀನ್ ಪಾರ್ಕ್ ಮೈದಾನ ಬಂದರ್ ಬಳಿ Maruti Swift ಕಾರಿನಲ್ಲಿ ಕುಳಿತು ಮಾದಕ ವಸ್ತುವನ್ನು ಯುವಕ, ಯುವತಿಯರಿಗೆ ಮಾರಾಟ ಮಾಡುತ್ತಿರುವಾಗ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿರುತ್ತದೆ.
ಎರಡೂ ಪ್ರಕರಣದಲ್ಲಿ ಬಂಧಿತರಿಂದ 53.87 ಗ್ರಾಂ MDMA, 103.20 ಹೈಡ್ರೋವಿಡ್ ಗಾಂಜಾ, MG Hector ವಾಹನ, ಹಾಗೂ 60 ಗ್ರಾಂ ಹೈಡ್ರೋವಿಡ್ ಗಾಂಜಾ, 1.155 ಗ್ರಾಂ ಗಾಂಜಾ ಮತ್ತು ಮಾರುತಿ ಶಿಪ್ಟ್ ಕಾರು ಪೊಲೀಸರು ವಶಕ್ಕೆ ಪಡೆದು, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅ.ಕ್ರ.56/2026 ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ.29/2026 ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
