ದುಡ್ಡು ಕೊಟ್ಟರೆ ಸಿಗುತ್ತೆ ಶುದ್ಧ ಗಾಳಿ.!, ಟ್ರೆಂಡ್ ಆಗುತ್ತಿದೆ ಶುದ್ಧವಾದ ಗಾಳಿ ನೀಡುವ ಚಿಕಿತ್ಸಾಲಯಗಳು

ರಾಷ್ಟ್ರೀಯ

ದುಡ್ಡು.. ದುಡ್ಡು ಪ್ರಪಂಚದಲ್ಲಿ ದುಡ್ಡು ಇಲ್ಲದೆ ಏನೂ ನಡೆಯಲ್ಲ. ಕೊನೆಗೆ ದುಡ್ಡು ಇಲ್ಲದಿದ್ದರೆ ಒಳ್ಳೆಯ ಗಾಳಿ ಕೂಡ ಸಿಗಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ದೇಶದ ಕೆಲವು ರಾಜಧಾನಿಗಳಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಾ ಇದ್ದು, ವಾತಾವರಣ ಮಾಲಿನ್ಯದಿಂದ ಆತಂಕ ಮೂಡಿಸುತ್ತಿದೆ. ಕೆಲವೇ ವರ್ಷಗಳ ಹಿಂದೆ ಮೆಟ್ರೋ ಪೊಲಿಟಿ ಸಿಟಿಗಳಲ್ಲಿ ಅತ್ಯಂತ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದ ಜನರಿಗೆ ಇದೀಗ ವಾಯು ಮಾಲಿನ್ಯದ ಪರಿಣಾಮ ದೊಡ್ಡ, ದೊಡ್ಡ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲೇ 4,000 ರೂಪಾಯಿ ಕೊಟ್ಟರೆ ಸಿಗುತ್ತದಂತೆ ಶುದ್ಧವಾದ ಗಾಳಿ. ರಾಜಧಾನಿಗಳಲ್ಲಿನ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ, ಕೆಮ್ಮು ಮತ್ತು ನೆಗಡಿಯು ಸೇರಿ ಶ್ವಾಸಕೋಶ ಸಂಬಂಧಿ ತೊಂದರೆಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಪ್ರಮುಖ ಕಾರಣ ಬ್ರಹತ್ ನಗರಗಳಲ್ಲಿ ಹೆಚ್ಚಾಗುತ್ತಿರುವ, ವಾತಾವರಣ ಕೆಡಿಸುತ್ತಿರುವ ವಾಯು ಮಾಲಿನ್ಯ. ಹೀಗಾಗಿ ಬ್ರಹತ್ ನಗರಗಳಲ್ಲಿ ಇದೀಗ ಶೇಕಡಾ 100 ರಷ್ಟು ಆಮ್ಲಜನಕ ಪಡೆಯಲು ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರಂತೆ. ಒಳ್ಳೆಯ ಗಾಳಿಗಾಗಿ ಕೈಯಿಂದ ಹಣ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಈಗಿನ ಅಪಾಯದಿಂದ ಬಚಾವ್ ಆಗಲು ಜನರು ಕೂಡ ದುಡ್ಡು ಕೊಟ್ಟು ಒಳ್ಳೆಯ ಗಾಳಿ ಪಡೆಯಲು ಮುಂದಾಗುತ್ತಿದ್ದಾರಂತೆ.!

ಮನುಷ್ಯರು ಆಮ್ಲಜನಕವನ್ನು ಪ್ರಕೃತಿದತ್ತವಾದ ವಾತಾವರಣದಿಂದ ನೇರವಾಗಿ ಎಳೆದುಕೊಳ್ಳುವ ಶಕ್ತಿ ಹೊಂದಿದ್ದು, ಆಕ್ಸಿಜನ್ ಇಲ್ಲದೆ ಮನುಷ್ಯನ ದೇಹ ಬದುಕಿ ಉಳಿಯಲು ಆಗುವುದಿಲ್ಲ. ಹೀಗಿದ್ದಾಗ ನಗರ ಪ್ರದೇಶದ ವಾತಾವರಣ ಮಾಲಿನ್ಯ ಪರಿಣಾಮ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ಆರೋಗ್ಯ ಕಾಪಾಡಿಕೊಂಡು ದುಡಿಯುವುದೇ ಸವಾಲಾಗಿ ಪರಿಣಮಿಸಿದೆ. ಇಂತಹ ಸ್ಥಿತಿಯಲ್ಲಿ ಶುದ್ಧವಾದ ಮತ್ತು ಪ್ಯೂರ್ ಆಕ್ಸಿಜನ್ ನೀಡಲು ಲ್ಯಾಬ್ ಗಳು ಶುರುವಾಗಿದೆಯಂತೆ. ಇಲ್ಲಿ ನಿಮಗೆ ಸುಮಾರು 4,000 ರೂಪಾಯಿ ತನಕ ಹಣ ವ್ಯಯಯಿಸಿ ಶುದ್ಧ ಗಾಳಿ ಪಡೆಯಬಹುದಾಗಿದೆ.

ಬೆಳೆದು ಎಮ್ಮರಕ್ಕೇರಿ ವಾಯು ಮಾಲಿನ್ಯದಿಂದ ಕಲೂಷಿತಗೊಂಡಿರುವ ನಗರಗಳಲ್ಲಿ ಈ ರೀತಿಯ ಶುದ್ಧವಾದ ಗಾಳಿ ನೀಡುವ ಚಿಕಿತ್ಸಾಲಯಗಳು ಟ್ರೆಂಡ್ ಆಗುತ್ತಿದೆ. ದುಡ್ಡು ಕೊಟ್ಟು ಗಾಳಿ ಪಡೆಯುವವರು ಯಾರು.? ಸಿಟಿಯಲ್ಲಿ ವಾಸವಿದ್ದು ಆರೋಗ್ಯ ಸರಿ ಇಲ್ಲದೇ ಇರುವವರು ಹಾಗೂ ಈಗಿನ್ನೂ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುವ ರೋಗಿಗಳು ಇದೀಗ ಆಕ್ಸಿಜನ್ ಚಿಕಿತ್ಸಾಲಯಗಳ ಮೊರೆ ಹೋಗುತ್ತಿದ್ದಾರಂತೆ.!