‘ಸಿಟಿ ಹೈಲೈಟ್ಸ್’ ಪತ್ರಿಕೆಯ ಮುಖ್ಯಸ್ಥ ಎಂ.ಪಿ ಅರುಣ್ ಕುಮಾರ್ ರವರಿಗೆ KUJW 2024 ನೇ ಸಾಲಿನ ಗಣೇಶ್ ಜಿ. ದತ್ತಿ ಪ್ರಶಸ್ತಿ

ರಾಜ್ಯ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUJW) ದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬೀದರ್ ನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಟಿ ಹೈಲೈಟ್ಸ್ ಇಂಗ್ಲಿಷ್ ಪತ್ರಿಕೆಯ ಶಿವಮೊಗ್ಗ ಮುಖ್ಯಸ್ಥ (ಬ್ಯೂರೋ ಛೀಪ್), ಪತ್ರಿಕೋದ್ಯಮದಲ್ಲಿ ವೃತ್ತಿ ನೈಫುಣ್ಯತೆ ಮತ್ತು ವೃತ್ತಿಪರತೆಯನ್ನು ಕಾಯ್ದುಕೊಂಡಿರುವ ಅರುಣ್ ಕುಮಾರ್ ರವರಿಗೆ ಗಣೇಶ್.ಜಿ. ದತ್ತಿ ಪ್ರಶಸ್ತಿ ದೊರಕಿದೆ. ಮೂಲತಃ ಅವಿಭಜಿತ ಜಿಲ್ಲೆ ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿಯವರಾದ ಎಂ.ಪಿ. ಅರುಣಕುಮಾರ್ ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರಸ್ತುತ ಸಿಟಿ ಹೈಲೈಟ್ಸ್ ಪತ್ರಿಕೆ ಶಿವಮೊಗ್ಗ ಇದರ ಮುಖ್ಯಸ್ಥರಾಗಿರುತ್ತಾರೆ.

ಈ ಮುಂಚೆ, ‘ಪೊಲೀಸ್ ವರ್ಲ್ಡ್’, ‘ಕರ್ನಾಟಕ ದೂತ’ ‘ಹಾಯ್ ಬೆಂಗಳೂರು’ ಈ ಟಿವಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಇಂಗ್ಲೀಷ್ ದಿನಪತ್ರಿಕೆ ‘ಸಿಟಿ ಹೈಲೈಟ್ಸ್’ನ ಶಿವಮೊಗ್ಗ ಆವೃತ್ತಿಯ ಬ್ಯೂರೋ ಛೀಪ್ ಆಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಶಸ್ತಿ ಅವರ ವೃತ್ತಿ ಬದ್ದತೆ ಮತ್ತು ಕೌಶಲ್ಯಕ್ಕೆ ಸಂದ ಗೌರವವಾಗಿದೆ.

ಎಂ.ಪಿ. ಅರುಣ್ ಕುಮಾರ್ ರವರು ಕಳೆದ 28 ವರ್ಷಗಳಿಂದ ಪತ್ರಿಕೋದ್ಯಮದ ಕ್ಷೇತ್ರದಲ್ಲಿದ್ದು, ಪೊಲೀಸ್ ವರ್ಲ್ಡ್ ಪತ್ರಿಕೆಯ ಶಿವಮೊಗ್ಗ-ದಾವಣಗೆರೆ ಜಿಲ್ಲೆಯ ವರದಿಗಾರನಾಗಿ, ಕರ್ನಾಟಕ ದೂತ, ರವೀಶ್ ಸಾರಥ್ಯದಲ್ಲಿ ಹಾಯ್ ಬೆಂಗಳೂರು ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಈ ಟಿವಿ ಮನರಂಜನಾ ವಾಹಿನಿಯ ‘ವಿಸ್ಮಯ’ ಎಂಬ ಕಾರ್ಯಕ್ರಮದ ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ಉಸ್ತುವಾರಿಯಾಗಿ, ಇಂಗ್ಲೀಷ್ ದಿನಪತ್ರಿಕೆ ” ಸಿಟಿ ಹೈಲೈಟ್ಸ್” ನ ಶಿವಮೊಗ್ಗ ಆವೃತ್ತಿಯ ಬ್ಯೂರೋ ಛೀಪ್ ಆಗಿ ಹಾಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು. ಅಲ್ಲದೇ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆಗೈದ ಅನುಭವ ಹೊಂದಿರುವರು. ಮಾತ್ರವಲ್ಲದೆ ತನ್ನದೇ ಒಡೆತನದಲ್ಲಿರುವ ರಾಜ್ಯಮಟ್ಟದ “ಉದಯ ಕರ್ನಾಟಕ” ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಾ ಹೀಗೆ ಹಲವು ಮಾಧ್ಯಮಗಳಲ್ಲಿ, ಸಂಘ ಸಂಸ್ಥಗಳಲ್ಲಿ ಕಾರ್ಯನಿರ್ವಹಿಸಿ, ನಿಷ್ಪಕ್ಷಪಾತವಾಗಿ ಹರಿತ ಲೇಖನ, ವರದಿಗಳನ್ನು ಪ್ರಕಟಿಸಿ, ಸರಿ ಸುಮಾರು ಇಪ್ಪತ್ತೆಂಟು ವರ್ಷಗಳಿಂದ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ವಿಶೇಷ ಅನುಭವ ಹೊಂದಿರುವ ಅಪರೂಪದ ಪತ್ರಕರ್ತರಾಗಿರುತ್ತಾರೆ.

ಪ್ರಶಸ್ತಿ ಪ್ರಧಾನ ಏಪ್ರಿಲ್ 11 ಮತ್ತು 12 ರಂದು ಬೀದರ್ ನಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಗಣೇಶ್. ಜಿ. ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಎಂ.ಪಿ.ಅರುಣ್ ಕುಮಾರ್ ರವರಿಗೆ ಗೌರವಪೂರ್ವಕ ಅಭಿನಂದನೆಗಳು.