ಪುತ್ತೂರು: ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು

ಕರಾವಳಿ

ಬದಿಯಡ್ಕದ ಪೃಥ್ವಿರಾಜ್, ಜಾರ್ಖಂಡ್ ಮೂಲದ ರೇಮುಂಡಾ ನಿಗೆ ಜಾಮೀನು

ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಬದಿಯಡ್ಕದ ನಿವಾಸಿ ಪ್ರಥ್ವಿರಾಜ್ ಹಾಗೂ ಮತ್ತೊಂದು ಪೋಕ್ಸೋ ಪ್ರಕರಣದ ಆರೋಪಿ ಜಾರ್ಖಂಡ್ ಮೂಲದ ರೇಮುಂಡಾ ಎಂಬಾತನಿಗೂ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ. ಡಿ ರವರು ಎರಡೂ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ.

ಆರೋಪಿ ಪ್ರಥ್ವಿರಾಜ್ ಸಂತ್ರಸ್ಥೆಯೊಂದಿಗೆ ಪ್ರೀತಿಯ ನಾಟಕವಾಡಿ, ಆಕೆಯನ್ನು ಪುಸಲಾಯಿಸಿ ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದ. ಸಂತ್ರಸ್ಥೆಯ ತಾಯಿಯ ಮಾತನ್ನು ಮೀರಿಯೂ ಆರೋಪಿಯು ಸಂತ್ರಸ್ಥೆಯನ್ನು ತಾನು ಹೋಗುವಲ್ಲಿಗೆಲ್ಲಾ ಕರೆದುಕೊಂಡು ಹೋಗುತ್ತಿದ ಎಂದು ಸಂತ್ರಸ್ಥೆಯ ತಾಯಿಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ಪೋಸ್ಕೋ ಕಾಯ್ದೆಯಡಿಯಲ್ಲಿ ದೂರನ್ನು ದಾಖಲಿಸಿಕೊಂಡು, ದಿನಾಂಕ 07-05-2026 ರಂದು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪ್ರಥ್ವೀರಾಜ್ ಪುತ್ತೂರಿನ ನ್ಯಾಯಾಲಯದಲ್ಲಿ ‘ಕಜೆ ಲಾ ಚೇoಬರ್’ ನ ನ್ಯಾಯವಾದಿ ಮಹೇಶ್ ಕಜೆ ರವರ ಮುಖಾಂತರ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು.

ಎರಡು ಕಡೆಯ ವಾದ-ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಿನಾಂಕ 20-05-2026 ರಂದು ಆರೋಪಿ ಪ್ರಥ್ವಿರಾಜ್ ಎಂಬಾತನಿಗೆ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಪೋಸ್ಕೋ ಪ್ರಕರಣದಲ್ಲಿ ಬಂಧಿತ ನಾಗಿದ್ದ ಜಾರ್ಖಂಡ್ ಮೂಲದ ರೇಮುಂಡ ಎಂಬಾತನಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀಮತಿ ಸರಿತಾ ಡಿ ರವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತಾರೆ.

ಜಾರ್ಖಂಡ್ ಮೂಲದ ರೇಮುಂಡನಿಗೆ ಜಾಮೀನು
ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರ್ಖಂಡ್ ಮೂಲದ ನಿವಾಸಿ ರೇಮುಂಡ ಎಂಬಾತನು ತನ್ನ ಊರಿನವಳೇ ಆದ ಅಪ್ರಾಪ್ತ ಬಾಲಕಿಯನ್ನು ಐವರ್ಣಾಡು, ಪಾಲೇಪ್ಪಾಡಿ ಎಂಬಲ್ಲಿಗೆ ಕರೆಕೊಂಡು ಹೋಗಿ, ಅಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂಬ ಬಗ್ಗೆ ಮಾಹಿತಿ ಪಡೆದ ಬೆಳ್ಳಾರೆ ಪೊಲೀಸರು ಆತನ ವಿರುದ್ದ POCSO ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಂಡು, ದಿನಾಂಕ 13-02-26 ರಂದು ಆರೋಪಿಯನ್ನು ಬಂಧಿಸಿ ನ್ಯಾಯಾoಗ ಬಂಧನಕ್ಕೆ ಒಪ್ಪಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ರೇಮುಂಡ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ‘ಕಜೆ ಲಾ ಚೇoಬರ್’ ನ ನ್ಯಾಯವಾದಿ ಮಹೇಶ್ ಕಜೆ ರವರ ಮುಖಾಂತರ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಸದ್ರಿ ಪ್ರಕರಣದ ವಾದ-ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಿನಾಂಕ: 19-05-2026 ರಂದು ಆರೋಪಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತದೆ.

ಈ ಎರಡೂ ವಿಬಿನ್ನ ಪ್ರಕರಣದ ಆರೋಪಿಗಳಾದ ಪ್ರಥ್ವಿರಾಜ್ ಮತ್ತು ರೇಮುಂಡಾ ರವರ ಪರವಾಗಿ ಪುತ್ತೂರಿನ ‘ಕಜೆ ಲಾ ಛೇಂಬರ್’ ಇದರ ಮುಖ್ಯಸ್ಥರಾದ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.