ಮುಲ್ಕಿ: ಮುಲ್ಕಿ ಪೊಲೀಸರ ಕಾರ್ಯಾಚರಣೆ: ಬೈಕ್ ಕಳ್ಳತನ ಆರೋಪಿಗಳ ಬಂಧನ; ಬೈಕ್‌, ಎರಡು ಮೊಬೈಲ್ ಪೋನ್ ವಶ

ಕರಾವಳಿ

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ಜಂಕ್ಷನ್ ಬಳಿ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಿದ ಹೋಂಡಾ ಯುನಿಕಾರ್ನ್ (ಕೆಎ 20 ಇಬಿ 6383) ಬೈಕ್ ಅನ್ನು ಕಳ್ಳತನ ಮಾಡಿದ ಆರೋಪಿಗಳಾದ ಮೊಹಮ್ಮದ್ ರಾಝಿಕ್, ಮುಕ್ಕ ಸುರತ್ಕಲ್. ಮತ್ತು ಉಬೈದತ್ ಹೈದರ್, ಅಂಗರಗುಂಡಿ ಬೈಕಂಪಾಡಿ ಎಂಬವರನ್ನು ಮುಲ್ಕಿ ಪೊಲೀಸರು ಬಂಧಿಸಿ, ಆರೋಪಿಗಳಿಂದ ಸುಮಾರು 20 ಸಾವಿರ ರೂ. ಮೌಲ್ಯದ ಕಳವಾದ ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು 18 ಸಾವಿರ ರೂ. ಮೌಲ್ಯದ ಮೊಬೈಲ್ ಪೋನಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ಪೊಲೀಸ್ ತಂಡದ ಸಿಬಂಧಿಗಳು ಈ ಪತ್ತೆ ಕಾರ್ಯಾಚರಣೆ ಭಾಗವಹಿಸಿದ್ದರು.

ಆರೋಪಿ ಮೊಹಮ್ಮದ್ ರಾಝಿಕ್ ಎಂಬಾತನ ಮೇಲೆ ಸುರತ್ಕಲ್ ಠಾಣಾ ಅ.ಕ್ರ. ಸಂಖ್ಯೆ: 98/2024 ಎನ್ ಡಿಪಿಎಸ್ ಕಾಯಿದೆಯಂತೆ, ಪಣಂಬೂರು ಠಾಣಾ ಅ.ಕ್ರ.ಸಂ: 88/2019 ರಂತೆ, ಮುಲ್ಕಿ ಠಾಣಾ ಅ.ಕ್ರ.ಸಂ:110/2023 ರಂತೆ ಎನ್ ಡಿಪಿಎಸ್ ಕಾಯಿದೆಯಡಿಯಲ್ಲಿ ಈ ಮೊದಲು ಪ್ರಕರಣದ ದಾಖಲಾಗಿದೆ.
ಹಾಗೂ ಆರೋಪಿ ಉಬೈದತ್ ಹೈದ‌ರ್ ಎಂಬಾತನ ಮೇಲೆ ಪಣಂಬೂರು ಪೊಲೀಸ್ ಠಾಣಾಯಲ್ಲಿ ಅ.ಕ್ರ.ಸಂ: 03/2002, ಅ.ಕ್ರ. ಸಂ:42/2014, ಅ.ಕ್ರ. ಸಂ: 140/2014 ರಂತೆ ಒಟ್ಟು ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.