ಗಂಜಿಮಠ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ; ನೆರೆಮನೆಯ ಜಲೀಲ್ ಎಂಬಾತನ ದುಷ್ಕೃತ್ಯ ಬಯಲು

ಕರಾವಳಿ

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠ ನಾರ್ಲಪದವು ಎಂಬಲ್ಲಿ ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಲಕಿ ಮೇಲೆ ನಿರಂತರ ಅತ್ಯಾಚಾರಗೈದ ನೆರೆಮನೆಯ ಆರೋಪಿ ಜಲೀಲ್ ಎಂಬಾತನ ಮೇಲೆ ಪೋಸ್ಕೋ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಗೆ (ಹೆಸರು ಬದಲಿಸಲಾಗಿದೆ) ಆರು ವರ್ಷ ತುಂಬುವಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ಬಿಟ್ಟು ಹೋಗಿದ್ದಾರೆ. ಈಕೆ ತನ್ನ ತಾಯಿಯ ತಂಗಿ (ಚಿಕ್ಕಮ್ಮ) ಯೊಂದಿಗೆ ಗಂಜಿಮಠ ಸಮೀಪದ ನಾರ್ಲಪದವು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಪ್ರಾಪ್ತ ಬಾಲಕಿಯ ಸಹೋದರ ಜೋಕಟ್ಟೆಯಲ್ಲಿ ಕಲಿಯುತ್ತಿದ್ದು ಹಾಸ್ಟೆಲ್ ನಲ್ಲಿ ವಾಸವಾಗಿದ್ದು, ಅಪ್ರಾಪ್ತ ಬಾಲಕಿ ಹತ್ತಿರದ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

ಅಪ್ರಾಪ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಬೆಳಿಗ್ಗಿನ ಹೊತ್ತು ತನ್ನ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ ಕರೆದುಕೊಂಡು ಹೋಗುತ್ತಿದ್ದು, ಆ ಸಂದರ್ಭದಲ್ಲಿ ನೆರೆಮನೆಯ ಜಲೀಲ್ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಪ್ರತಿದಿನ ಮಾತನಾಡಿಸುತ್ತಿದ್ದು, ತಿನ್ನಲು ಚಾಕಲೇಟ್ ನೀಡುತ್ತಿದ್ದನು. ಈ ವಿಷಯವನ್ನು ಬಾಲಕಿ ತನ್ನ ಚಿಕ್ಕಮ್ಮಳೊಂದಿಗೆ ಹೇಳಿದ್ದು ಜಲೀಲ್ ನಿಗೆ ಎಚ್ಚರಿಕೆ ಕೂಡ ನೀಡಿದ್ದರು.

ಜಲೀಲ್ ನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಬಾಲಕಿಯ ಮನೆಯವರ ಎಚ್ಚರಿಕೆ ನಂತರವೂ ಜಲೀಲ್ ತನ್ನ ದುರ್ಬುದ್ಧಿಯನ್ನು ಬಿಡದೆ ಬಾಲಕಿಯನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ. 2025 ಅಗಸ್ಟ್ 5 ರಂದು ಎಂದಿನಂತೆ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಬಾಲಕಿಯನ್ನು ತಡೆದು ಕಿಸ್ ನೀಡಿದ್ದು ಈ ವಿಚಾರವನ್ನು ಮನೆಯವರಿಗೆ ತಿಳಿಸದಂತೆ ಬೆದರಿಸಿದ್ದಾನೆ, ಮಾತ್ರವಲ್ಲ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ತೆರಳಿ ಬಾಲಕಿಯನ್ನು ಬಲವಂತವಾಗಿ ಬಟ್ಟೆ ಬಿಚ್ಚಿಸಿ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೇ ರೀತಿ ಅನೇಕ ಬಾರಿ ಬೇರೇ ಕಡೆಗಳಲ್ಲಿ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಲೈಂಗಿಕ ಕ್ರಿಯೆ ನಡೆಸುವ ಮೊದಲು ಬಾಲಕಿಗೆ ವಯಾಗ್ರ ಮಾತ್ರೆ ನೀಡುತ್ತಿದ್ದ, ಲೈಂಗಿಕ ಕ್ರಿಯೆ ನಡೆದ ನಂತರ ನೀರಿನ ಬಾಟಲಿಯಲ್ಲಿ I PEEL ಮಾತ್ರೆಯನ್ನು ಹಾಕಿ ಬಾಲಕಿಗೆ ಕುಡಿಯಲು ನೀಡುತ್ತಿದ್ದ. ನಂತರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ 7-8 ತಿಂಗಳಿನಿಂದ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ಇದೀಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ. ಬಜಪೆ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ರವರ ನೇತ್ರತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿ ಜಲೀಲ್ ನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.