ಬಂಟ್ವಾಳ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: MDMA ಸಹಿತ 5 ಲಕ್ಷ ಮೌಲ್ಯದ ಸ್ವತ್ತುಗಳ ವಶ, ಆರೋಪಿಗಳ ಬಂಧನ

ಕರಾವಳಿ

ದಿನಾಂಕ 12.08.2026 ರಂದು ಬಂಟ್ವಾಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ, ಐ.ಪಿ.ಎಸ್ ರವರ ನೇತೃತ್ವದ ತಂಡವು, ಬಂಟ್ವಾಳ‌ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿ, ಸುಮಾರು 2 ಲಕ್ಷ 25 ಸಾವಿರ ಮೌಲ್ಯದ 22.57 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ಹಾಗೂ 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ ಕಾರು ಹಾಗೂ 5 ಮೊಬೈಲ್‌ ಗಳು ಸೇರಿದಂತೆ ಒಟ್ಟು 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ

ಬಂಧಿತರನ್ನು ನಾಶೀರ್ ಹುಸೇನ್ ಅಡ್ಯಾರ್ ಮಂಗಳೂರು. ಮಹಮ್ಮದ್ ಜುನೈದ್ ಗೋಳ್ತಮಜಲು, ಬಂಟ್ವಾಳ.
ಮೊಹಮ್ಮದ್ ಅಫ್ರೀದಿ ಕಂಕನಾಡಿ ಮಂಗಳೂರು ಎಂಬವರನ್ನು ವಶಕ್ಕೆ ಪಡೆದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 112/2026, ಕಲಂ: 8(C) ಜೊತೆಗೆ 22(ಸಿ) NARCOTIC DRUGS & PSYCHOTROPIC SUBSTANCES ACT, 1985 Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ರನ್ನ ಗೌಡ ಎಸ್‌ ಪಾಟೀಲ್, ಹಾಗೂ ಪ್ರೊ. ಪಿ.ಎಸ್‌.ಐ ರವರಾದ ಶಿವರಾಮ್‌, ಫಕೀರಪ್ಪ ಮತ್ತು ಸಿಬ್ಬಂದಿಯವರಾದ ಉದಯ ರೈ, ರಾಧಾಕೃಷ್ಣ ಕೆ , ಪ್ರವೀಣ್‌ ರೈ, ಪ್ರಶಾಂತ್, ಲೋಕೇಶ್‌, ವಿವೇಕ್ ರೈ, ಕುಮಾರ್, ಬಸವರಾಜ್‌, ಶ್ರೀಧರ್‌, ಧನ್ಯಶ್ರೀ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್ ರವರು ಕಾರ್ಯಾಚರಣೆಯಲ್ಲಿ ಬಾಗವಹಿಸಿದ್ದರು.