ಕುಂದಾಪುರ ಪತ್ರಕರ್ತ ವಿರುದ್ಧ ಹಲ್ಲೆ ನಡೆಸಿದ ಭ್ರಷ್ಟಾಚಾರಿ ವೈದ್ಯ ಅಮಾನತು ಅಲ್ಲ ವಜಾಗೊಳ್ಳಲಿ; ಹೆಚ್ಚಿದ ಆಗ್ರಹ

ಕರಾವಳಿ

ಕುಂದಾಪುರ ಸರ್ಕಾರಿ ಆಸ್ಪತ್ರೆಯ ಭೃಷ್ಟಾಚಾರವನ್ನು ಬಯಲಿಗೆಳೆದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿಯವರ ಮೇಲೆ ವೈದ್ಯ , ಭೃಷ್ಟಾಚಾರಿ ಡಾ. ಮಹೇಂದ್ರ ಶೆಟ್ಟಿ ಬೀದಿರೌಡಿಗಳಂತೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯವಾಗಿದ್ದು , ಇದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆಗೆ ಸಮವಾಗಿದೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಯ ಅಕ್ರಮ , ಭೃಷ್ಟಾಚಾರದ ವಿರುದ್ಧ ಜನಸಾಮಾನ್ಯರ ಧ್ವನಿಯಾಗಿ ಶ್ರೀಕಾಂತ್ ಹೆಮ್ಮಾಡಿ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಿದ್ದರು. ಇದನ್ನು ನೆಪವಾಗಿಟ್ಟುಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಡಾ. ಮಹೇಂದ್ರ ಶೆಟ್ಟಿ ಪತ್ರಕರ್ತ ಹೆಮ್ಮಾಡಿರವರ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿರುವುದು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಇದು ನಿರ್ಭೀತರಾಗಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರನ್ನು ಭಯಭೀತಿಗೊಳಿಸಿದೆ. ಇಂತಹ ಅಯೋಗ್ಯ ವ್ಯಕ್ತಿ ವೈದ್ಯ ವೃತ್ತಿಗೆ ಕಳಂಕವಾಗಿದ್ದು , ಸರ್ಕಾರ ಅಮಾನತು ಬದಲಾಗಿ ಕೆಲಸದಿಂದಲೇ ವಜಾ ಮಾಡಬೇಕು. ಸಮಾಜದಲ್ಲಿ ಅತ್ಯಂತ ನಿರ್ಭಿತಿಯಿಂದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ಪತ್ರಕರ್ತರ ಮೇಲೆ ನಡೆದಿರುವ ಹಲ್ಲೆ ಪೈಶಾಚಿಕವಾಗಿದೆ. ಮಾನಸಿಕ ಅಸ್ವಸ್ಥತೆಯ ಈ ವೈದ್ಯನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ , ತಕ್ಷಣ ಜೈಲಿಗಟ್ಟಬೇಕು ಮತ್ತು ನಿರ್ಬಿತಿಯಿಂದ ಕೆಲಸ ಮಾಡಲು ಪತ್ರಕರ್ತರ ಸುರಕ್ಷತೆಯನ್ನು ಖಚಿತಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಬಗ್ಗೆ ಪತ್ರಕರ್ತರ ಮೇಲಿನ ಹಲ್ಲೆ , ದೌರ್ಜನ್ಯ , ಹಿಂಸೆ ತಡೆಗಟ್ಟಲು ವಿಶೇಷ ಪ್ರತ್ಯೇಕ ಕಾನೂನು ಜಾರಿಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.