ಕರ್ನಾಟಕ ರಾಜ್ಯಾದ್ಯಂತ ಅಹಿಂದ ಚಳುವಳಿಯ ಭಾಗವಾಗಿ, ಪ್ರತಿ ಜಿಲ್ಲೆಯಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟವನ್ನು ಬಲಪಡಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ, ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಹಾಗೂ ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೂಡಲೇ ಬಹಿರಂಗಪಡಿಸಿ, ಜಾರಿಗೊಳಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಲು ಈ ವರದಿಗಳು ಅತ್ಯಂತ ಮಹತ್ವದ್ದಾಗಿದ್ದು, ಸರ್ಕಾರಗಳು ಯಾವುದೇ ವಿಳಂಬ ಮಾಡದೆ ವರದಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಹಿಂದ ನಾಯಕರಾದ ದೀಪಕ್ ಪೆರ್ಮುದೆ ಮನೀಶ್ ಬೋಲಾರ್, ಮೀನಾ ಟೆಲಿಸ್, ವಸಂತ್, ನಿಸಾರ್ ಕರಾವಳಿ, ಅವಿತಾ ನೊರೋಣ, ಲಿಡಿಯಾ ಲೋಬೋ, ಮೇರಿ ಪಿಂಟೋ, ಸ್ಟಾನಿ ಪಿಂಟೋ, ಅನ್ವರ್ ರಜಾಕ್ ಎಸ್.ಎಂ, ವಿಲ್ಫ್ರೆಡ್, ಹಫೀಸ್ ಕೊಲಂಬೆ, ಫಯಾಜ್ ಹಾಮದ್ ಬಜ್ಪೆ ಹಾಗೂ ಅಡ್ವಕೇಟ್ ಹನೀಫ್, ರಾಕೇಶ್ ಕುಂದರ್, ಸುಜೀರ್, ವಿನಾಯಕ, ನಿಶಿತ್, ಅವಿನಾಶ್ ಸೇರಿದಂತೆ ಅಹಿಂದ ಚಳುವಳಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
