ಉಂಡ ಮನಗೆ ದ್ರೋಹ ಬಗೆದ ಕಿರಾತಕ ಮುಕ್ಕಚ್ಚೇರಿಯ ಚೈನೀಸ್ ನವಾಜ್. ಕುಖ್ಯಾತ ದರೋಡೆಕೋರರ ಬಂಧನ

ಕರಾವಳಿ

ಇತ್ತೀಚೆಗೆ ಉಳ್ಳಾಲದ ಮೀನಿನ ವ್ಯಾಪಾರಿಯನ್ನು ಅಡ್ಡಗಟ್ಟಿ ತಲವಾರಿನಲ್ಲಿ ಹಲ್ಲೆಗೈದು ಹಣ ದರೋಡೆಗೈದ ಪ್ರಕರಣದ ಆರೋಪಿಗಳೇ ಬೆಂಗಳೂರಿನಲ್ಲಿ ಪೊಲೀಸರು ಗುಂಡಿಕ್ಕಿ ಬಂಧಿಸಲ್ಪಟ್ಟವರು.ಉಳ್ಳಾಲ ನಿವಾಸಿ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಮುಸ್ತಪಾ ಎಂಬವರನ್ನು ಅಡ್ಡಗಟ್ಟಿ ತಲವಾರಿನಲ್ಲಿ ಹಲ್ಲೆಗೈದು ಹಣ ದರೋಡೆಗೈದ ಪ್ರಕರಣದ ಆರೋಪಿಗಳೇ ಬೆಂಗಳೂರಿನಲ್ಲಿ ಪೊಲೀಸರು ಗುಂಡಿಕ್ಕಿ ಬಂಧಿಸಿರುವುದು.ಬೆಂಗಳೂರಿನ ಕೊತ್ತನೂರು ಠಾಣೆಯ ಪೊಲೀಸರು ಉಡುಪಿ ಮೂಲದ ಇಬ್ಬರು ದರೋಡೆಕೋರರನ್ನು ಅಂದು ಬಂಧಿಸಿದ್ದರು.ಇದೀಗ ತಿಂಗಳ ಹಿಂದೆ ಉಳ್ಳಾಲದಲ್ಲಿ ದರೋಡೆ ನಡೆಸಿದವರೂ ಅವರೇ ಎಂದು ಅವರ ವಿಚಾರಣೆ ಮಾಡಿದಾಗ ತಿಳಿದು ಬಂದಿದೆ.

ಉಡುಪಿ ಮೂಲದ ಮಹಮ್ಮದ್ ಆಶಿಕ್ (22) ಮತ್ತು ಕುಂದಾಪುರ ಮೂಲದ ಇಸಾಕ್ (21) ಎಂಬ ಇಬ್ಬರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ದರೋಡೆಕೋರರು ಕಾರಿನಲ್ಲಿ ಸಾಗುತ್ತಿದ್ದಾಗ ಕೊತ್ತನೂರು ಠಾಣೆ ಇನ್ಸ್ ಪೆಕ್ಟರ್ ಚೆನ್ನೇಶ್ ಮತ್ತು ಪಿಎಸ್ಐ ಉಮೇಶ್ ಅರೋಪಿಗಳನ್ನು ಸೆರೆಹಿಡಿಯಲು ಯತ್ನಿಸಿದಾಗ, ಆರೋಪಿಗಳು ತಲವಾರಿನಲ್ಲಿ ಉಮೇಶ್ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ, ಚೆನ್ನೇಶ್ ತನ್ನಲ್ಲಿದ್ದ ರಿವಾಲ್ವರ್ ನಲ್ಲಿ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿ ಬಳಿಕ ಬಂಧಿಸಿದ್ದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಆಕೆಯ ಎಟಿಎಂ ಕಾರ್ಡ್ ಪಡೆದು ಹಣ ಎಗರಿಸಿದ್ದಲ್ಲದೆ, ಆಕೆಯ ಸರವನ್ನೂ ಕಿತ್ತುಕೊಂಡಿದ್ದರು. ಬಳಿಕ ಲೈಂಗಿಕ ಕಿರುಕುಳ ನೀಡಿ, ಬೆಳಂದೂರಿನ ವೈಟ್ ಫೀಲ್ಡ್ ಬಳಿ ಯುವತಿಯನ್ನು ಬಿಟ್ಟಿದ್ದರು. ಯುವತಿ ಮರುದಿನ ಕೊತ್ತನೂರು ಠಾಣೆಯಲ್ಲಿ ದೂರು ನೀಡಿದ್ದರು. ಡಕಾಯಿತಿ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಅರೋಪಿಗಳು ಕಾರಿನಲ್ಲಿ ಸಾಗುತ್ತಿದ್ದಾಗಲೇ ಸೆರೆಹಿಡಿದು ವಿಚಾರಣೆ ನಡೆಸಿದ ವೇಳೆ
ತಿಂಗಳ ಹಿಂದೆ ನಡೆದ ಕಲ್ಲಾಪುವಿನ ಮೀನಿನ ವ್ಯಾಪಾರಿಯ ದರೋಡೆ ಪ್ರಕರಣದಲ್ಲಿ ಇವರು ಶಾಮೀಲಾದವರೇ ಎಂದು ತಿಳಿದು ಆರೋಪಿಗಳನ್ನು ಮಂಗಳೂರು ಪೊಲೀಸರು ಅಲ್ಲಿಂದ ಬಾಡಿ ವಾರೆಂಟ್ ಮೇಲೆ ಪಡೆದು ವಿಚಾರಣೆ ನಡೆಸಿದಾಗ ಕಳೆದ ಮಾರ್ಚ್ 5ರಂದು ಬೆಳಗ್ಗೆ ಉಳ್ಳಾಲದ ಮೀನಿನ ವ್ಯಾಪಾರಿ ಮುಸ್ತಫಾ ತನ್ನ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಬರುತ್ತಿದ್ದಾಗ, ಆಡುಂಕುದ್ರು ಎಂಬಲ್ಲಿ ಟೆಂಪೋವನ್ನು ಅಡ್ಡಗಟ್ಟಿ,ತಲವಾರು ತೋರಿಸಿ, ವ್ಯಾಪಾರಿ ಬಳಿಯಿದ್ದ ಎರಡು ಲಕ್ಷ ರೂಪಾಯಿ ಹಣದ ಕಂತೆಯನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಈ ವೇಳೆ ದರೋಡೆಕೋರರು ಬೀಸಿದ ತಲವಾರನ್ನು ಕೈಯಿಂದ ಹಿಡಿದಿದ್ದರಿಂದ ಅವರ ಅಂಗೈಗೆ ಗಾಯವಾಗಿ ರಕ್ತ ಕೋಡಿ ಹರಿದಿತ್ತು.

ದರೋಡೆ ತಂಡದಲ್ಲಿ ಹಲವಾರು ಮಂದಿ ಇದ್ದು,ತಮ್ಮ ತಂಡವನ್ನು “ಟೀಮ್ ಗರುಡ-900”ಎಂದು ಕರೆದುಕೊಳ್ಳುತ್ತಿದ್ದರು. ದರೋಡೆ, ಡಕಾಯಿತಿ, ಕಾರುಗಳನ್ನು ಅಡ್ಡಗಟ್ಟಿ ಸುಲಿಗೆ, ಕಳ್ಳತನ ಮಾದರಿಯ ಅಪರಾಧ ಕೃತ್ಯಗಳಲ್ಲಿ ಈ ತಂಡದ ಸದಸ್ಯರು ತೊಡಗಿಸಿದ್ದರು. ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರ ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಈಗ ಬಂಧಿಸಲ್ಪಟ್ಟವರು ಮೂಲತಃ ಉಡುಪಿಯವರಾಗಿದ್ದರೂ, ಉಪ್ಪಿನಂಗಡಿಯ ತಮ್ಮ ಸಂಬಂಧಿಕರ ಮನೆಯಲ್ಲೇ ಹೆಚ್ಚು ಇರುತ್ತಿದ್ದರು.

ದರೋಡೆಗೊಳಗಾದ ಮೀನಿನ ವ್ಯಾಪಾರಿ ಮುಸ್ತಫಾ ಎಂಬವರ ಮನೆಯಲ್ಲೇ ತಿಂದುನ್ನುತ್ತಾ,ಖರ್ಚಿಗೆ ಹಣ ಪಡೆಯುತ್ತಿದ್ದ ಮುಕ್ಕಚ್ಚೇರಿಯ ಚೈನೀಸ್ ನವಾಜ್ ಎಂಬವನೇ ಅಡಂಕುದ್ರು ದರೋಡೆಯ ಸೂತ್ರಧಾರ. ಈ ದರೋಡೆ ತಂಡಕ್ಕೆ ಮೀನಿನ ವ್ಯಾಪಾರಿ ಮುಸ್ತಫಾರವರ ಬಗ್ಗೆ ಮಾಹಿತಿ ನೀಡಿ ದರೋಡೆ ಮಾಡಲು ಪ್ಲಾನ್ ಹಾಕಿದ್ದೆ ಚೈನೀಸ್ ನವಾಜ್. ಈತ ಮುಸ್ತಪಾರ ಬಗ್ಗೆ ಮಾಹಿತಿ ನೀಡಿ ಬೆಳಿಗ್ಗೆ 20 ಲಕ್ಷ ರೂಪಾಯಿಯೊಂದಿಗೆ ದಕ್ಕೆಗೆ ಹೋಗುವ ಬಗ್ಗೆ ಮಾಹಿತಿ ನೀಡಿ ದರೋಡೆಗೆ ಸ್ಕೆಚ್ ರೂಪಿಸಿದ್ದ.ತನಗೆ ಅನ್ನ ನೀಡಿ,ಆರ್ಥಿಕ ಸಹಾಯ ಮಾಡುತ್ತಿದ್ದ ಮುಸ್ತಫಾರಿಗೆ ಸ್ಕೆಚ್ ಹಾಕಿದ ಕಿರಾತಕ ಮುಕ್ಕಚ್ಚೇರಿಯ ಚೈನೀಸ್ ನವಾಜ್ ಬಂಧನವಾಗಿ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.