ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ, ಮೂಡುಬಿದಿರೆಯ ಅಬ್ದುಲ್ ನಝೀರ್ ಅವರ ಸಹೋದರ,ಹೈಕೋರ್ಟ್ ನ್ಯಾಯವಾದಿ ಅಬ್ದುಲ್ ಫಾರೂಕ್ ಅವರು ಗುರುವಾರ ರಾತ್ರಿ ಬೆಂಗಳೂರಿನ ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಹೈಕೋರ್ಟ್ ವಕೀಲರಾಗಿರುವ ಅವರು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದರು.
ಗುರುವಾರ ರಾತ್ರಿ ಎರಡು ಗಂಟೆ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು ಕೆಲವೇ ಹೊತ್ತಿನಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರಂದು ತಿಳಿದುಬಂದಿದೆ.
48 ವರ್ಷ ಪ್ರಾಯದವರಾಗಿರುವ ಫಾರೂಕ್ ಅವರಿಗೆ ಪತ್ನಿ, ಓರ್ವ ಪುತ್ರನಿದ್ದಾನೆ. ಫಾರೂಕ್ ಅವರ ಮೃತದೇಹ ಬೆಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದೆ.ಅಂತಿಮ ಸಂಸ್ಕಾರವು ಅವರ ಸ್ವಂತ ಊರಾದ ಮೂಡಬಿದ್ರೆಯಲ್ಲಿ ನೆರವೆರಲಿದೆ.
