ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಇದರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಿದ್ದು,ವಿಜಯ ಟೈಮ್ಸ್ ಸಂಪಾದಕರಾಗಿರುವ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಕೆಯುಡಬ್ಲ್ಯೂಜೆಯ ಅತ್ಯುತ್ತಮ ಸ್ಕೂಪ್ ವರದಿಗಾಗಿ ಬಿ.ಎಸ್.ವೆಂಕಟರಾಂ ಪ್ರಶಸ್ತಿ ಲಭಿಸಿದೆ.ವಿಜಯಪುರದಲ್ಲಿ ಫೆಬ್ರವರಿ 4 ಮತ್ತು 5ರಂದು ನಡೆಯಲಿರುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪತ್ರಿಕೋದ್ಯಮದ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮೆರೆದಿರುವವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.ವಿಜಯಲಕ್ಷ್ಮಿ ಶಿಬರೂರು ಸೇರಿ ಹಲವು ಮಂದಿ ಪತ್ರಕರ್ತರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
