ಕದ್ರಿ ಜಾತ್ರೆ,ಮುಸ್ಲಿಮ್ ವರ್ತಕರಿಗೆ ನಿಷೇಧ, ಸಂಘಿಗಳು ಮುಸ್ಲಿಮ್ ಗ್ರಾಹಕರನ್ನು ನಿಷೇಧಿಸಲಿ! : ಕೆ.ಅಶ್ರಫ್,ಮುಸ್ಲಿಂ ಒಕ್ಕೂಟ

ಕರಾವಳಿ

ಇತ್ತೀಚೆಗಷ್ಟೇ ಪ್ರವೀಣ್ ತೊಗಾಡಿಯಾ ಮುಸ್ಲಿಮ್ ಹೊರತಾದ ಸಂವಿಧಾನದ ಬಗ್ಗೆ ಹೇಳಿಕೆ ಕೊಟ್ಟು ನಗೆಪಾಟಲು ಆದ ಬೆನ್ನಿಗೇ,ಮಂಗಳೂರಿನ ಕದ್ರಿ ಕ್ಷೇತ್ರದ ಜಾತ್ರೆಯಲ್ಲಿ ಹೊರಾಂಗಣದಲ್ಲಿ ಸಂಘ ಪರಿವಾರ ಮುಸ್ಲಿಮ್ ವರ್ತಕರಿಗೆ ನಿಷೇಧದ ಫಲಕ ಅಳವಡಿಸಿದೆ! . ಸಂಘ ಪರಿವಾರ ಇನ್ನೂ ಕೂಡಾ ತನ್ನ ಎಂದಿನ ಚಾಳಿಯಾದ ಮುಸ್ಲಿಮ್ ವರ್ತಕರ ಬಹಿಷ್ಕಾರ ವನ್ನು ತ್ಯಜಿಸದಂತೆ ಇಲ್ಲ! .
ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ವ್ಯಾಪಾರ ವಹಿವಾಟು ನಡೆಸುವ ಸಂಘ ಪರಿವಾರದ ಪೋಷಕ ವರ್ತಕರು,ಉದ್ಯಮಿಗಳು ಸಾಧ್ಯವಾದರೆ ತಮ್ಮ ಮಳಿಗೆಗಳಿಗೆ ಮುಸ್ಲಿಮ್ ಗ್ರಾಹಕರನ್ನು ಬಹಿರಂಗವಾಗಿ ನಿಷೇಧಿಸುವ ಫಲಕಗಳನ್ನು ಅಳವಡಿಸಲಿ! .

ಬೀದಿ ವ್ಯಾಪಾರವನ್ನೇ ತಲೆಮಾರುಗಳಿಂದ ನಂಬಿ ಬಂದಿರುವ ಬೀದಿ ವರ್ಥಕರನ್ನು ಹೊರಗಿಟ್ಟು ಉದ್ಯಮ ಬಹಿಷ್ಕಾರವನ್ನು ಪ್ರೋತ್ಸಾಹಿಸಿ, ರಾಜಕೀಯ ಮತ ದ್ರುವೀಕರಣ ಮಾಡುತ್ತಿರುವ ಸಂಘದ ಇತರ ಉದ್ಯಮಿಗಳಿಗೆ , ಮುಸ್ಲಿಮ್ ಗ್ರಾಹಕ ರಹಿತ ವ್ಯವಸ್ಥೆ ಏನೆಂದು ಆಗ ಅರಿವಾಗುವ ಸಾದ್ಯತೆ ಅಧಿಕ. ಈ ದೇಶದಲ್ಲಿ ಅನಾದಿ ಕಾಲದಿಂದಲೂ ಕೊಡು ಕೊಳ್ಳುವಿಕೆಯ ಪ್ರಭಲ ಸಂಸ್ಕೃತಿ ಯಿಂದಾಗಿ ಆರ್ಥಿಕ ವ್ಯವಹಾರ ನೆಲೆ ನಿಂತಿದೆ. ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು,ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ.