ಮಂಗಳೂರು: ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಜನವರಿ 22 ರಂದು , ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ದ. ಕ ಜಿಲ್ಲಾ ಮಟ್ಟದ ಪ್ರಜಾ ದ್ವನಿ ಸಮಾವೇಶ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಡಿಕೇಶಿ ರವರ ಸಮ್ಮುಖ ದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆ.ಅಶ್ರಫ್ ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ವಿಧಾನ ಸಭಾ ಕ್ಷೇತ್ರವಾದ ಮಂಗಳೂರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುತ್ಸದ್ದಿ ರಾಜಕಾರಣಿ ಎಂದೇ ಕರೆಯಲ್ಪಡುವ,ಹಾಲಿ ಶಾಸಕರು ಮತ್ತು ಮಾಜಿ ಸಚಿವರೂ ಆದ ಶ್ರೀ ಯು.ಟಿ.ಖಾದರ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆನಂತರ ಮಂಗಳೂರು ಮಹಾನಗರ ಪಾಲಿಕೆ ಮಂಗಳೂರು ಪೋರ್ಟ್ ವಾರ್ಡ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಲತೀಫ್ ವಿರುದ್ಧ ಪರಾಜಯ ಹೊಂದಿದ್ದರು.
ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಗೆ 1997ರಲ್ಲಿ ನಡೆದ ಚುನಾವಣೆಯಲ್ಲಿ ಬಂದರ್ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಮನಾಪ ವಾರ್ಡ್ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು, 2002 ರಲ್ಲಿ ಅದೇ ವಾರ್ಡ್ ನಿಂದ ಮರು ಆಯ್ಕೆ ಗೊಂಡಿದ್ದರು, ಈ ಅವಧಿಯಲ್ಲಿ ಮನಪಾ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಆಯ್ಕೆ ಆಗಿದ್ದರು. ಇದೇ ಸಂದರ್ಭ ಹಿಂದುಳಿದ ವರ್ಗ ಎ ಅಭ್ಯರ್ಥಿ ಗೆ ಮನಾಪ ಮೇಯರ್ ಹುದ್ದೆ ಮೀಸಲು ಬಂದ ಸಂದರ್ಭ ಕೆ . ಅಶ್ರಫ್ 2005-06 ನೆ ಸಾಲಿನಲ್ಲಿ ಮನಾಪ ಮೇಯರ್ ಆಗಿ ಆಯ್ಕೆ ಆಗಿದ್ದರು.
ವಿವಿಧ ರಾಜಕೀಯ ಪಕ್ಷದಿಂದ ಕೆ.ಅಶ್ರಫ್ ರವರಿಗೆ ಪ್ರಾತಿನಿಧ್ಯ ಆಹ್ವಾನ ವಿದ್ದರೂ, ತಮ್ಮ ಸಾಮುದಾಯಿಕ ಚಟುವಟಿಕೆ ಮತ್ತು ರಾಜಕೀಯ ಕ್ಷೇತ್ರದ ಮದ್ಯೆ ಅಂತರ ಕಾಯ್ದು ಕೊಂಡಿದ್ದರು. ಪ್ರಸ್ತುತ ಕೆ.ಅಶ್ರಫ್ ಪ್ರಭಾವಿ ಕಾಂಗ್ರೆಸ್ ನಾಯಕರೊಂದಿಗೆ ಅವರ ನಿಕಟ ಸಂಪರ್ಕ ಮತ್ತು ಕಾಂಗ್ರೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಕೆ.ಅಶ್ರಫ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆಗೆ ಪುಷ್ಟಿ ನೀಡಿತ್ತು. ಪ್ರಸ್ತುತ ಜನವರಿ 22 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಳ್ಳಲಿದ್ದಾರೆ.
