ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳು ಭರದ ಸಿದ್ಧತೆಗಳನ್ನು ನಡೆಸಿವೆ.ಇದೇ ವೇಳೆ ಕಾಂಗ್ರೆಸ್ ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಮೀರ್ ರಂಜನ್ ಬರ್ಮನ್ ಅವರ ಪುತ್ರ ಸುದೀಪ್ ರಾಯ್ ಬರ್ಮನ್ ಹೆಸರೂ ಸೇರಿದೆ.ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಸಮೀರ್ ರಂಜನ್ ಬರ್ಮನ್ ಅವರು ರಾಜಧಾನಿ ಅಗರ್ತಲಾದಿಂದ ಸ್ಪರ್ಧಿಸಲಿದ್ದಾರೆ.
ಜನವರಿ 21 ರಂದು ಚುನಾವಣಾ ಆಯೋಗವು ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿತು. ಫೆಬ್ರವರಿ 16 ರಂದು ಮತದಾನ ನಡೆಯಲಿದೆ ಮತ್ತು ಅದರ ಫಲಿತಾಂಶಗಳು ಮಾರ್ಚ್ 2 ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ಜೊತೆಗೆ ಘೋಷಣೆಯಾಗಲಿದೆ. ಚುನಾವಣಾ ಆಯೋಗದ ಪ್ರಕಾರ ಮಾರ್ಚ್ 4 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
