ರಾಜ್ಯದೆಲ್ಲೆಡೆ ಭಾರೀ ಸಂಚಲನ ಉಂಟು ಮಾಡಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ನಾಲ್ವರು ಆರೋಪಿಗಳನ್ನು ಭಾರತಕ್ಕೆ ಕರೆತರಲು ಕೇಂದ್ರದ ಪ್ರಮುಖ ಏಜೆನ್ಸಿ ‘ರಾ’ ಜೊತೆ ಎನ್.ಐ.ಎ ಸಂಪರ್ಕದಲ್ಲಿದ್ದು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ ಅನ್ನುವ ಮಾಹಿತಿ ಹೊರಬಿದ್ದಿದೆ.
ಪ್ರವೀಣ್ ನೆಟ್ಟಾರ್ ಹತ್ಯಾ ಕೇಸನ್ನು ರಾಜ್ಯ ಸರ್ಕಾರ ಎನ್ ಐ ಗೆ ವಹಿಸಿತ್ತು. ಎನ್ ಐ ಐ ಇದೀಗಲೇ ಕೇಸಿಗೆ ಸಂಬಂಧಿಸಿದಂತೆ 14 ಆರೋಪಿಗಳನ್ನು ಬಂಧಿಸಿತ್ತು. ಈ ಕೇಸಿಗೆ ಸಂಬಂಧಪಟ್ಟಂತೆ ಇನ್ನೂ ಆರು ಜನ ಆರೋಪಿಗಳ ಬಂಧನ ಬಾಕಿ ಇದೆ. ಈಗಾಗಲೇ 1500 ಪುಟಗಳ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್, ಕೆ.ಎ ಮಸೂದ್ ವಿದೇಶದಲ್ಲಿ ತಲೆಮರೆಸಿಕೊಂಡಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಮೂಲಕ ‘ರಾ’ ಏಜೆನ್ಸಿ ಫೀಲ್ಡಿಗಿಳಿದು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಅನ್ನುವ ಮಾಹಿತಿ ಕೇಳಿ ಬಂದಿದೆ.
