ನಂದಿ ಗುಡ್ಡೆಯ ವೇಶ್ಯಾವಾಟಿಕೆ ಪ್ರಕರಣ,ಚಿನ್ನ ದರೋಡೆಯ ನಕಲಿ ಪ್ರಕರಣ,ಮಂಗಳೂರಿನ ಡ್ರಗ್ಸ್ ಪ್ರಕರಣ
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್. ಸಬ್ಬ್ ಇನ್ಸ್ ಪೆಕ್ಟರ್. ಮತ್ತು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಮೇಲೆ ಕರ್ನಾಟಕ ಲೋಕಾಯುಕ್ತಕ್ಕೆ ಭ್ರಷ್ಟಾಚಾರದ ಬಗ್ಗೆ ದೂರನ್ನು ನೀಡಿದ್ದೆ. ಲೋಕಾಯುಕ್ತವು ಸ್ವತಂತ್ರವಾಗಿ ತನಿಖೆ ನಡೆಸುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ಆರೋಪಿಸಿದವರನ್ನೇ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿರುವುದರಿಂದ ಭ್ರಷ್ಟಾಚಾರದ ಆರೋಪಿಗಳು ಎಲ್ಲಾ ಸಾಕ್ಷಿಗಳನ್ನು ನಾಶ ಪಡಿಸುವ ಸಾಧ್ಯತೆ ಮತ್ತು ಹಣ ನೀಡಿದವರನ್ನು ಬೆದರಿಸುವ ಸಾದ್ಯತೆ ಹೆಚ್ಚಿದೆ ಎಂದು ಕಬೀರ್ ಉಳ್ಳಾಲ್ ಹೇಳಿದರು.
ಕೆಲವು ದಿನಗಳಿಂದ ನನಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಪದೇ ಪದೇ ಪೊನ್ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತದೆ ಮತ್ತು ಮನೆಯ ಹತ್ತಿರ ಪೊಲೀಸರನ್ನು ಕಳುಹಿಸುವುದು ನೋಟೀಸು ಕಳುಹಿಸಿ ಮಾನಸಿಕ ದೈರ್ಯವನ್ನು ಕುಗ್ಗಿಸುವ ಪ್ರಯತ್ನ ಪೊಲೀಸ್ ಆಯುಕ್ತರಿಂದ ನಡೆಯುತ್ತಾ ಬಂದಿದೆ.
ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಪೊಲೀಸ್ ಆಯುಕ್ತರೆ ನೇರ ಕಾರಣ ಸರಕಾರವು ಭ್ರಷ್ಟಾಚಾರ ನಡೆಸುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತದೆ. ನಿಷ್ಠಾವಂತ ಅಧಿಕಾರಿಗಳನ್ನು ಅವರು ಭ್ರಷ್ಟಾಚಾರದ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದ ತಕ್ಷಣ ಅವರ ಎತ್ತಂಗಡಿ ಮಾಡುತ್ತಾರೆ.ಅತೀ ಹೆಚ್ಚು ಭ್ರಷ್ಟಾಚಾರ ಪೊಲೀಸ್ ಇಲಾಖೆ.ಕಂದಾಯ ಇಲಾಖೆ.ಸಾರಿಗೆ ಇಲಾಖೆಯಲ್ಲಿ ನಡೆಯುತ್ತದೆ. ಸರಕಾರವು ಅಧಿಕಾರಿಗಳ ವರ್ಗಾವಣೆಗಳಲ್ಲಿ ಹಣ ಪಡೆದು ಕೊಂಡಿದೆ.ಭ್ರಷ್ಟಾಚಾರ ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತದೆ.
ನಾನು ಉಳ್ಳಾಲ ಪೊಲೀಸ್ ಠಾಣೆಯ CC ಪೂಟೇಜ್ ಕೇಳಿದ್ದು ಅವರು ಇಂದಿನ ವರೆಗೂ ನೀಡಿಲ್ಲ ಅವರು ನಿಷ್ಠಾವಂತರಾದರೆ ಅವರಿಗೆ CC ಪೂಟೇಜ್ ನೀಡಲು ಭಯವೇಕೆ 18 ತಿಂಗಳುಗಳ CC ಪೋಟೇಜ್ ಶೇಕರಿಸಿ ಇಡಬೇಕು ಯಾರ ಬೇಡಿಕೆ ಬಂದರೆ ಅವರಿಗೆ ಅದರ ಪ್ರತಿಗಳನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳ ಬಗ್ಗೆ CBI ತನಿಖೆ ನಡೆಸಿದರೆ ಪೊಲೀಸ್ ಆಯುಕ್ತರ ಭ್ರಷ್ಟಾಚಾರದ ಸಂಪೂರ್ಣ ಮಾಹಿತಿ ಹೊರ ಬರುತ್ತೆ. ಪ್ರಕರಣ
1) ನಂದಿ ಗುಡ್ಡೆ ಪ್ಲಾಟೊಂದರಲ್ಲಿ ನಡೆದ ವೇಶ್ಯವಾಟಿಕೆ ಪ್ರಕರಣ.
2) ದುಬೈಯಿಂದ ಚೆನ್ನೈಗೆ ಹೊಗ ಬೇಕಾಗಿದ್ದ ಚಿನ್ನ ದರೋಡೆಯ ನಕಲಿ ಪ್ರಕರಣ ಅದರಲ್ಲಿ ಹಣ ಪಡೆದು ನಿರಪರಾಧಿಗಳ ಬಂದನ.
3)ಮಂಗಳೂರಿನ ಡ್ರಗ್ಸ್ ಪ್ರಕರಣ.
ಮಂಗಳೂರಿನ ಕೆಲವು ಮೆಡಿಕಲ್ ಸ್ಟೂಡೆಂಟ್ ಗಳು ಪೊಲೀಸ್ ಆಯುಕ್ತರಿಗೆ ಹೆದರಿ ಓಡಿ ಹೋಗಿದ್ದಾರೆ.ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಬಂದ ನಂತರ ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಜನರು ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಆಯುಕ್ತರಿಂದ ಅನ್ಯಾಯಕ್ಕೊಳಗಾದವರು ಭಯಪಡದೆ ಮುಂದೆ ಬಂದು ದೂರು ಕೊಡಿ.ಸರಕಾರವು ಮಂಗಳೂರು ಪೊಲೀಸ್ ಆಯುಕ್ತರನ್ನುಈ ಕೂಡಲೇ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆಯು ಸಾರ್ವಜನಿಕರ ರಕ್ಷಕರೆಂಬುದನ್ನು ಸಾಬೀತು ಪಡಿಸಬೇಕೆಂದು ಆಗ್ರಹಿಸಿ,
ಇಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಮುಂದೆ ಕಬೀರ್ ಉಳ್ಳಾಲ್ ತಮ್ಮ ಅಳಲನ್ನು ತೋಡಿಕೊಂಡರು.
