ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್ ಗೆ ಆಹ್ವಾನಿಸಿದರು.
ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್ ಗೆ ಆಹ್ವಾನಿಸಿದರು. ನಾವು ಯಾರಿಗೆ ದೂರು ನೀಡಬೇಕು ಹೇಳಿ ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ನ್ಯಾಯಾಧೀಶರ ಸಮ್ಮುಖದಲ್ಲಿ ತನ್ನ ಅಳಲು ತೋಡಿಕೊಂಡ ಘಟನೆ ಮಂಗಳೂರಿನಲ್ಲಿ ಮಂಗಳವಾರ ನಡೆದಿದೆ. ನಮಗೂ ಈ ಹಾಳು ದಂಧೆ ನಡೆಸಲು ಮನಸ್ಸಿಲ್ಲ.ಎಲ್ಲಾದರೂ ಒಂದು ಕೆಲಸ ಕೊಡಿ. ಯಾವುದಾದರೂ ಸರಿ. ಒಳ್ಳೆಯ ಜೀವನ ನಡೆಸುತ್ತೇವೆ. ನಮ್ಮ ಪಾಡಿಗೆ ನಾವಿರುತ್ತೇವೆ ಎಂದಿದ್ದಾರೆ.
ನಗರದ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ರಾತ್ರಿ ತನ್ನನ್ನು ಸೆಕ್ಸ್ಗೆ ಆಹ್ವಾನಿಸಿದರು. ಹಿರಿಯ ಅಧಿಕಾರಿಯೇ ಹೀಗೆ ಮಾಡಿದರೆ ನಾವು ಯಾರಿಗೆ ದೂರು ನೀಡುವುದು.? ಇದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ನ್ಯಾಯಾಧೀಶರ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ನಗರದ ಜಿ.ಪಂ. ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ,ಅರಿವು ಕಾರ್ಯಾಗಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಹಿರಿಯ ಪೊಲೀಸ್ ಅಧಿಕಾರಿ ಈ ರೀತಿ ವರ್ತಿಸಿದಾಗ ನಾವು ಏನು ಮಾಡುವುದು.? ಯಾರಿಗೆ ದೂರು ನೀಡುವುದು ಎಂದು ನಾಗರಿಕ ಸಮಾಜದಲ್ಲಿ ತಾವೆದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದರು.
ಹಿರಿಯ ಸಿವಿಲ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ.ಕ ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಇದಕ್ಕೆ ಪ್ರತಿಕ್ರಿಯೆ ನೀಡಿ, ಶೋಷಣೆಗೆ ಒಳಗಾಗುವ ಲಿಂಗತ್ವ ಅಲ್ಪಸಂಖ್ಯಾತರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕು. ಟ್ರಾನ್ಸ್ ಜೆಂಡೆರ್ನವರು ಉಚಿತವಾಗಿ ನ್ಯಾಯ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ದೂರು ನೀಡಬಹುದು. ಪ್ರಾಧಿಕಾರದ ಸೇವೆಯು ಉಚಿತವಾಗಿರುತ್ತದೆ. ದೂರುಗಳು ಬಂದಾಗ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೂಡ ಪಡೆಯಲು ಅವಕಾಶವಿರುತ್ತದೆ ಎಂದು ನ್ಯಾಯಾಧೀಶೆ ಅವರಿಗೆ ಧೈರ್ಯ ತುಂಬಿದರು
