ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಆತಂಕಗೊಳಗಾಗುತ್ತಾರೆ, ಓದಲು ಶುರುವಿಡುತ್ತಾರೆ. ಓದಿದ್ದನ್ನು ನೆನಪಿನಲ್ಲಿಡಬೇಕೆಂದು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ನಿದ್ರೆಬಿಟ್ಟು ಹಗಲು ರಾತ್ರಿ ಓದುತ್ತಾರೆ. ನಿದ್ದೆ ಬರಬಾರದೆಂದು ಟೀ, ಕಾಫಿ ಸೇವಿಸುತ್ತಾರೆ. ಆದರೆ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ತನಗೆ ರಾತ್ರಿ ನಿದ್ರೆ ಬರಬಾರದು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಪಾಸಾಗಬೇಕು ಎಂದು, ಮಾತ್ರೆಯನ್ನು ಸೇವಿಸಿ ಓದಲು ಪ್ರಾರಂಭಿಸಿದ್ದಾಳೆ.
ಈಕೆ ಉತ್ತರಪ್ರೇದಶದ 10ನೇ ತರಗತಿ ಓದುವ ವಿದ್ಯಾರ್ಥಿನಿ. ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಹತ್ತನೇ ಕ್ಲಾಸಿನಲ್ಲಿ ಉತ್ತಮ ಅಂಕ ಪಡೆದರೆ, ಮುಂದಿನ ಭವಿಷ್ಯ ಉಜ್ವಲಕ್ಕಾಗಿ ಈಕೆ ನಿದ್ದೆಗೆಟ್ಟು ಓದಿ, ಉತ್ತಮ ಅಂಕ ಗಳಿಸಲು ನಿರ್ಧರಿಸಿದ್ದಾಳೆ. ಈ ಕಾರಣಕ್ಕಾಗಿ ಆಕೆ ತೆಗೆದುಕೊಂಡ ನಿರ್ಧಾರ ಮಾತ್ರ ಭಯಂಕರ.
ಈಕೆ ಸೇವಿಸುತ್ತಿದ್ದ ಮಾತ್ರೆ ಉಗ್ರರು ಬಲಸುತ್ತಿದ್ದ ಮಾತ್ರೆ.! ಒಂದು ಮಾತ್ರೆ ತೆಗೆದುಕೊಂಡರೆ 40 ಗಂಟೆ ನಿದ್ರೆ ಬರುವುದಿಲ್ಲ. ಈ ಮಾತ್ರೆ ಸೇವಿಸಿ, ಪ್ರಜ್ಞೆತಪ್ಪಿ ಬಿದ್ದು, ವಿದ್ಯಾರ್ಥಿನಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳ ಈ ಅನಾರೋಗ್ಯ ಕಾರಣವೇನೆಂದು ಕೇಳಿದಾಗ, ವೈದ್ಯರು ಅವಳು ತೆಗೆದುಕೊಂಡ ಮಾತ್ರೆಯ ಬಗ್ಗೆ ಗುಟ್ಟು ಬಿಟ್ಟಿದ್ದಾರೆ.
ಆಕೆ ಸೇವಿಸಿದ ಮಾತ್ರೆಯಿಂದ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ನರಗಳು ಊದಿಕೊಂಡಿದೆ. ಹಾಗಾಗಿ ಆಕೆಗೆ ಆಪರೇಷನ್ ಮಾಡಿ, ಆ ಸಮಸ್ಯೆಯಿಂದ ಆಕೆಗೆ ಮುಕ್ತಿ ಕೊಡಿಸಲಾಗಿದೆ. ಮಾಮೂಲಿ ತಲೆಸುತ್ತು ಎಂದು ತಂದೆ ತಾಯಿ ಸುಮ್ಮನಿದ್ದಿದ್ದರೆ, ಇಷ್ಟೊತ್ತಿಗಾಗಲೇ, ಆಕೆಯ ಪ್ರಾಣಪಕ್ಷಿ ಹೊರಟು ಹೋಗಿರುತ್ತಿತ್ತು. ಇನ್ನು ಈ ಮಾತ್ರೆಗಳು ಅಷ್ಟು ಸುಲಭವಾಗಿ ಮೆಡಿಕಲ್ನಲ್ಲಿ ಸಿಗುವುದಿಲ್ಲ. ಯಾಕಂದ್ರೆ ಅದು ಕಳ್ಳದಾರಿಯಲ್ಲಿ ಸಾಗಿಸುವ ಮಾತ್ರೆ, ಈ ಮಾತ್ರೆ ಈಕೆಗೆ ಹೇಗೆ ದೊರೆಯಿತು ಎಂಬ ಬಗ್ಗೆ ಮಾಹಿತಿ ನಿಗೂಢವಾಗಿದೆ. ಅದ್ದರಿಂದ ಮಕ್ಕಳ ಬಗ್ಗೆ ಹೆತ್ತವರು ಅತೀ ಹೆಚ್ಚು ಗಮನ ಹರಿಸಬೇಕಾಗಿದೆ.
